Publish Date: Tue, 05 Feb 2019 (13:05 IST)
Updated Date: Tue, 05 Feb 2019 (13:07 IST)
ಬಾಗಲಕೋಟೆ : ಹಾಸನದಲ್ಲಿ ಪ್ರಜ್ವಲ್ ಗೆಲ್ಲಲು ಸಾಧ್ಯವಿಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎ.ಮಂಜು ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಎ.ಮಂಜು ಅವರು,’ ದೇವೇಗೌಡರಿಂದ ಮಾತ್ರ ಹಾಸನದಲ್ಲಿ ಗೆಲ್ಲೋಕೆ ಸಾಧ್ಯ, ಪ್ರಜ್ವಲ್‍ಗೆ ಸಾಧ್ಯವಿಲ್ಲ’ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ‘ಎ.ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲು ಆಗುತ್ತಾ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಲು ಆಗುತ್ತಾ? ಅವನಿಗೆ ನಾನು ರಿಯಾಕ್ಟ್ ಮಾಡಲ್ಲ, ಇಗ್ನೋರ್ ಮಾಡ್ತೀನಿ. ಅವನನ್ನು ಇಷ್ಟು ಹೊತ್ತಿನಲ್ಲಿ ನೆನಪು ಯಾಕೆ ಮಾಡ್ತೀರಿ’ ಎಂದು ರೇವಣ್ಣ ಗರಂ ಆಗಿ ಹೇಳಿದ್ದಾರೆ.
ಹಾಸನಕ್ಕೆ ದೇವೇಗೌಡರು ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರು ಸ್ಪರ್ಧಿಸಬೇಕೆಂದು ನೀವೇ ಹೇಳಿ. ಅವರನ್ನೇ ನಿಲ್ಲಿಸೋಣ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.