Select Your Language

Notifications

webdunia
webdunia
webdunia
webdunia

ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ವಿ. ವೀರಪ್ಪ: ರಾಜ್ಯಪಾಲದಿಂದ ಆದೇಶ

Deputy Lokayukta

Sampriya

ಬೆಂಗಳೂರು , ಗುರುವಾರ, 4 ಜುಲೈ 2024 (20:08 IST)
Photo Courtesy X
ಬೆಂಗಳೂರು: ರಾಜ್ಯದ ನೂತನ ಉಪ ಲೋಕಾಯುಕ್ತರನ್ನಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನವರಾದ ವೀರಪ್ಪ, 2023ರ ಮೇ ತಿಂಗಳಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಉಪ ಲೋಕಾಯುಕ್ತರ ಎರಡು ಹುದ್ದೆಗಳಿವೆ. ಅದರಲ್ಲಿ ಒಂದು ಹುದ್ದೆ ಖಾಲಿ ಇತ್ತು. ಎರಡನೇ ಉಪ ಲೋಕಾಯುಕ್ತರ ಹುದ್ದೆಗೆ ವೀರಪ್ಪ ಅವರನ್ನು ನೇಮಿಸಿದ್ದು, ಅವರ ಅಧಿಕಾರದ ಅವಧಿಯು ಐದು ವರ್ಷ ಇರಲಿದೆ

ಎರಡನೇ ಉಪ ಲೋಕಾಯುಕ್ತರ ಹುದ್ದೆ ನೇಮಕದ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರೊಂದಿಗೆ ಸಮಾಲೋಚನೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೀರಪ್ಪ ಅವರನ್ನು ನೇಮಿಸುವಂತೆ ಜೂನ್‌ 24ರಂದು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿದೇಶಕ್ಕೆ ಹಾರಲು ಸಜ್ಜಾದ ಪ್ರಧಾನಿ ಮೋದಿ: ಜುಲೈ 8ರಿಂದ ರಷ್ಯಾ, ಆಸ್ಟ್ರಿಯಾ ಪ್ರವಾಸ