Select Your Language

Notifications

webdunia
webdunia
webdunia
webdunia

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ದೇವೇಗೌಡರ ಕುಟುಂಬ ರಾಜಕೀಯಕ್ಕೆ ರಾಜೀನಾಮೆಗೆ ವೀರಪ್ಪ ಮೊಹ್ಲಿ ಆಗ್ರಹ

Sex Scandal

Sampriya

ಬೆಳಗಾವಿ , ಗುರುವಾರ, 2 ಮೇ 2024 (18:54 IST)
Photo Courtesy X
ಬೆಳಗಾವಿ:  ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ವಿಚಾರ ಎಚ್‌.ಡಿ.ದೇವೇಗೌಡ ಹಾಗೂ ಅವರ ಇಡೀ ಕುಟುಂಬ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಆಗ್ರಹಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರ. ವಿಡಿಯೊ ಬಿಡುಗಡೆಯಲ್ಲಿ ಯಾರ ಪಾತ್ರವಿದೆ ಎಂಬುದು ಮುಖ್ಯವಲ್ಲ. ಯಾರು ತಪ್ಪು ಮಾಡಿದ್ದಾರೆ.  ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊರಬೇಕು ಎಂದರು.

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಒಂದು ದೇಶ, ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬಹುದು. 2029ರಲ್ಲಿ ಚುನಾವಣೆಯೇ ನಡೆಯುವುದಿಲ್ಲ ಎಂಬ ಭಯವೂ ನಮಗಿದೆ ಎಂದರು.

ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ಮಾಜಿ ಮನೆ ಕೆಲಸದಾಕೆ ದೂರನ್ನು ನೀಡಿದ್ದಾರೆ. ಇದೀಗ ಎಸ್‌ಐಟಿ ಈ ತನಿಖೆಯನ್ನು ವಹಿಸಿಕೊಂಡಿದ್ದು, ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಸಾವು, ಮತದಾರರಿಗೆ ಬೆದರಿಕೆ ಆರೋಪ: ಶಾಸಕ ಭರಮಗೌಡ ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್