Publish Date: Wed, 21 Jun 2023 (19:35 IST)
Updated Date: Wed, 21 Jun 2023 (18:37 IST)
ಉಡುಪಿಯಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯ ರಕ್ಷಣೆಗೆಗಾಗಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ತಾವೇ ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಣೆ ಮಾಡುವ ಮೂಲಕ ಪೇಜಾವರ ಮಠದ ಯತಿಗಳು ಮಹತ್ತರ ಕಾರ್ಯ ಮಾಡಿದ್ದಾರೆ. ಉಡುಪಿಯ ಮುಚ್ಚುಕೋಡು ಸುಬ್ರಮಣ್ಯ ದೇವಾಲಯದ 40 ಅಡಿ ಆಳದ ಬಾವಿಗೆ ಬೆಕ್ಕಿನ ಮರಿಯೊಂದು ನಿಯಂತ್ರಣ ತಪ್ಪಿ ಬಿದ್ದಿದ್ದು, ಇದೇ ಸಮಯದಲ್ಲಿ ದೇವಾಲಯಕ್ಕೆ ಆಗಮಿಸಿದ ಯತಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ಶ್ರೀಗಳು ಹಿಂದು ಮುಂದು ನೋಡದೆ ಹಗ್ಗದ ಸಹಾಯದಿಂದ ಆಳವಿರುವ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ. ಪೇಜಾವರ ಶ್ರೀಗಳ ಮಹತ್ಕಾರ್ಯಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.