Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪ್ರಕರಣ, ತನಿಖೆ ಅಂತಿಮ ಹಂತದಲ್ಲಿರುವಾಗ ತನಿಖಾಧಿಕಾರಿ ದಿಢೀರ್‌ ವರ್ಗಾವಣೆ

Darshan Arrest

sampriya

ಬೆಂಗಳೂರು , ಶುಕ್ರವಾರ, 14 ಜೂನ್ 2024 (16:09 IST)
Photo By Instagram
ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ ಚಿತ್ರದುರ್ಗಾದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದು, ಇದೀಗ ಈ ಪ್ರಕರಣದ ತನಿಖಾಧಿಕಾರಿಯನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು, ಇದೀಗ ಈ ಪ್ರಕರಣದ ಹೊಣೆಯನ್ನು ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಅವರಿಗೆ ವಹಿಸಲಾಗಿದೆ.

ಇನ್ನೂ ಗಿರೀಶ್‌ ಅವರನ್ನು ಚುನಾವಣೆ ನಿಮಿತ್ತ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಿಂದ ಕಾಮಾಕ್ಷಿಪಾಳ್ಯ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅದರಂತೆ ಅವರನ್ನು ಇದೀಗ ವಾಪಾಸ್‌ ಅಲ್ಲಿಗೆ ವರ್ಗಾಯಿಸಲಾಗಿದೆ. ಇದು ದಿಢೀರ್‌ ವರ್ಗಾವಣೆಯಲ್ಲ, ಮುಂಚೆನೇ ಇದು ತಿಳಿದಿತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮತ್ತೊಬ್ಬ ಅಧಿಕಾರಿ ಈ ಸಂಬಂಧ ಪ್ರತಿಕ್ರಿಯಿಸಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣ ಅಂತಿಮ  ಹಂತದಲ್ಲಿರುವಾಗ ಗಿರೀಶ್‌ ಅವರನ್ನು ಇನ್‌ಸ್ಪೆಕ್ಟರ್‌ ಹುದ್ದೆಯಲ್ಲೇ ಮುಂದುವರೆಸುವ ಅವಕಾಶಗಳಿತ್ತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ ಯಡಿಯೂರಪ್ಪ ಮೇಲೆ ಕೇಸ್ ಹಾಕಿದ ಮಹಿಳೆ ಮಾನಸಿಕವಾಗಿ ಅಸ್ವಸ್ಥೆ: ಸಿಟಿ ರವಿ