Select Your Language

Notifications

webdunia
webdunia
webdunia
webdunia

ಒಂದು ಸಿನಿಮಾಗೆ ದರ್ಶನ್ ಎಷ್ಟು ಕೋಟಿ ಅಡ್ವಾನ್ಸ್ ಪಡೆಯುತ್ತಾರೆ

Darshan

Krishnaveni K

ಬೆಂಗಳೂರು , ಶುಕ್ರವಾರ, 14 ಜೂನ್ 2024 (10:52 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಚಿತ್ರರಂಗದಲ್ಲಿ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವ ಬಹುಬೇಡಿಕೆಯ ನಟರು. ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಅಡ್ವಾನ್ಸ್ ಹಣವೆಷ್ಟು ಎಂಬ ವಿವರ ಇಲ್ಲಿದೆ.

ದರ್ಶನ್ ಈಗಾಗಲೇ ಮೂರು ಬಿಗ್ ಬಜೆಟ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಪೈಕಿ ಡೆವಿಲ್ ಬಹುತೇಕ ಶೂಟಿಂಗ್ ನಡೆದಿದೆ. ಉಳಿದಂತೆ ಜೋಗಿ ಪ್ರೇಮ್ ಜೊತೆ, ತರುಣ್ ಸುಧೀರ್ ಜೊತೆ ಸಿನಿಮಾ ಘೋಷಣೆಯಾಗಿತ್ತು. ಈ ಎಲ್ಲಾ ಸಿನಿಮಾಗಳಿಗೆ ಅವರು ಅಡ್ವಾನ್ಸ್ ಹಣ ಪಡೆದುಕೊಂಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಹಲವು ಸಿನಿಮಾಗಳ ಆಫರ್ ಗಳನ್ನು ಅವರು ಪಡೆದಿದ್ದು, ಅವುಗಳಲ್ಲಿ ಕೆಲವನ್ನು ಒಪ್ಪಿಕೊಂಡಿದ್ದರು ಎಂಬ ಮಾಹಿತಿಯಿದೆ.

ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ದುಬಾರಿ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತವೆ. ಕೇವಲ ಕನ್ನಡ ಮಾರುಕಟ್ಟೆಯಿಂದಲೇ ಅವರ ಸಿನಿಮಾಗಳು ಗಳಿಕೆ ಮಾಡುತ್ತವೆ. ಇದು ಅವರ ಅಭಿಮಾನಿ ಬಳಗಕ್ಕಿರುವ ಸಾಕ್ಷಿ.

ಆದರೆ ಇದೀಗ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ರಿಂದಾಗಿ ಅವರಿಗೆ ಅಡ್ವಾನ್ಸ್ ನೀಡಿದ್ದ ನಿರ್ಮಾಪಕರು ಕಂಗಾಲಾಗಿದ್ದಾರೆ. ಸರಿ ಸುಮಾರು ಒಂದು ಸಿನಿಮಾಗೆ ದರ್ಶನ್ 3 ಕೋಟಿ ರೂ.ಗಳಷ್ಟು ಅಡ್ವಾನ್ಸ್ ಪಡೆಯುತ್ತಾರೆ. ಇದೀಗ ಒಪ್ಪಿಕೊಂಡಿರುವ ಮೂರು ಸಿನಿಮಾಗಳಿಂದ ಅವರು ಇಷ್ಟೇ ಪ್ರಮಾಣದಲ್ಲಿ ಅಡ್ವಾನ್ ಪಡೆದಿದ್ದಾರಂತೆ. ಒಂದು ವೇಳೆ ದರ್ಶನ್ ಗೆ ಜೈಲು ಶಿಕ್ಷೆಯಾದರೆ ಅವರ ಮೇಲೆ ಕೋಟಿ ಕೋಟಿ ಹೂಡಿಕೆ ಮಾಡಿರುವ ನಿರ್ಮಾಪಕರು ದಿವಾಳಿಯಾಗಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ತಂದೆಯನ್ನು ಬೆಂಬಲಿಸಿದೇ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್: ದರ್ಶನ್ ಪುತ್ರ ವಿನೀಶ್ ಬೇಸರ