ಬಳ್ಳಾರಿ ನಗರದಲ್ಲಿ ಕಾನೂನು ಬಾಹಿರವಾಗಿ ಈ ಹಿಂದೆ ಅಳವಡಿಸಿರುವ ನಾಮ ಫಲಕಗಳ ತೆರವು ಕಾರ್ಯಚರಣೆ ಮುಂದುವರೆದಿದೆ. ಜಾಹೀರಾತು ಫಲಕಗಳ ಅಳವಡಿಕೆದಾರರು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ನಾಮಫಲಕಗಳನ್ನು ಅಳವಡಿಸಿದ್ದಾರೆ. ಫಲಕಗಳ ಅಳತೆಯಲ್ಲಿ ವ್ಯತ್ಯಾಸ, ಪ್ರತಿ ವರ್ಷದ ರಿನೀವಲ್ ಮಾಡಿಸದೆ ಇರುವುದು, ಅಳವಡಿಕೆಯ ಪ್ರದೇಶದಲ್ಲಿ ಸೌಂದರ್ಯಿಕರಣ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳದೆ ಇರುವುದು ಸೇರಿದಂತೆ ಹಲವು ವಿಷಯಗಳಲ್ಲಿ ನಾಮಫಲಕಗಳ ಮಾಲೀಕರು ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಈ ಕುರಿತು ಬಳ್ಳಾರಿ ಮಹಾನಗರ ಪಾಲಿಕೆಯ ಕಮಿಷನರ್ ಅವರು ಮಾಲೀಕರಿಗೆ 3 ಬಾರಿ ನೋಟೀಸ್ ವಿತರಣೆ ಮಾಡಿದ್ದಾರೆ. ಆದರೂ ನಾಮಫಲಕ ಮಾಲೀಕರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಇರುವುದರಿಂದ ಕಮಿಷನರ್ ಎಸ್.ಎನ್.ರುದ್ರೇಶ್ ಅವರು ತೆರವು ಕಾರ್ಯಚರಣೆಗೆ ಮುಂದಾಗಿದ್ದಾರೆ.