Webdunia - Bharat's app for daily news and videos

Install App

ಬೆಳೆಗಾರರಿಗೆ ಪರಿಹಾರ ಧನ : ಮೇ 26 ರೊಳಗೆ ಅರ್ಜಿ ಸಲ್ಲಿಸಿ

Webdunia
ಗುರುವಾರ, 14 ಮೇ 2020 (16:44 IST)
ಕೋವಿಡ್-19 ನಿಂದಾಗಿ ಲಾಕ್ ಡೌನ್ ಮಾಡಿರುವ  ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಸರಕಾರ ಸಹಾಯಧನ ವಿತರಣೆ ಮಾಡುತ್ತಿದ್ದು, ಬೆಳೆಗಾರರಿಂದ ಅರ್ಜಿ ಸಲ್ಲಿಸಲು ಸೂಚಿಸಿದೆ.

ಲಾಕ್ ಡೌನ್ ನಿಂದ ಎಲ್ಲಾ ದೇವಾಲಯಗಳು ಮುಚ್ಚಿದ್ದು, ಹಬ್ಬ, ಮದುವೆ, ಸಭೆ ಸಮಾರಂಭಗಳು ಹಾಗೂ ಮತ್ತಿತರೆ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿರುತ್ತದೆ. ಹೂವಿನ ಬೆಳೆಗಳಿಗೆ ಬೇಡಿಕೆ ಇಲ್ಲದ ಕಾರಣ ಹೂ ಬೆಳೆಗಾರರು ತಾವು ಬೆಳೆದಂತಹ ಹೂಗಳನ್ನು ಕಟಾವು ಮಾಡದೆ ಬೆಳೆ ಹಾನಿಯಾಗಿರುತ್ತದೆ.

ಈ ಹಿನ್ನಲೆಯಲ್ಲಿ 2020-21 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರಾಮನಗರ ಜಿಲ್ಲೆಯ ಹೂವು ಬೆಳೆಗಾರರಿಗೆ ಪರಿಹಾರಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದ್ದಾರೆ.

ಹೂವಿನ  ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿ ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ಪ್ರದೇಶಕ್ಕೆ ರೂ. 25,000 ಮೀರದಂತೆ ಪರಿಹಾರ ಧನ ನೀಡಲಾಗುವುದು.

ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯಲ್ಲಿನ ಪಟ್ಟಿಯಲ್ಲಿ ಹೆಸರಿಲ್ಲದ ಹೂ ಬೆಳಗಾರರು ನಿಗದಿತ ಅರ್ಜಿ ನಮೂನೆ, ಪಹಣಿ, ಬ್ಯಾಂಕ್ ಖಾತೆ ಪುಸ್ತಕ ಮತ್ತು ಸ್ವಯಂ ದೃಢೀಕರಣ ಘೋಷಣಾ ಪತ್ರದೊಂದಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಮೇ 26 ರೊಳಗಾಗಿ ಅರ್ಜಿ ಸಲ್ಲಿಸುವುದು.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲು ಹತ್ತುವ ಭರದಲ್ಲಿ ಬೆಲೆ ಬಾಳುವ ಐಫೋನ್ ನ್ನೇ ಕಳೆದುಕೊಂಡ Video

ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ನಾಗೇಂದ್ರ: ವಿಜಯೇಂದ್ರ

ದೇಶವಿರೋಧಿ ಕಾಂಗ್ರೆಸ್ಸಿನವರಿಂದ ನಾವು ದೇಶಾಭಿಮಾನ ಕಲಿಯಬೇಕಿಲ್ಲ: ವಿಜಯೇಂದ್ರ

ರೇಪ್ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದ ವ್ಯಕ್ತಿಯನ್ನು ಪೊಲೀಸರು ಯಾವ ಸ್ಥಿತಿಗೆ ತಂದು ಬಿಟ್ಟರು ನೋಡಿ video

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲೇ ಕೊಳೆತ ಮಾಂಸ: ಇಂಥಾ ಹೋಟೆಲ್ ನಂಬಿ ಹೋಗೋದು ಹೇಗೆ Video

ಮುಂದಿನ ಸುದ್ದಿ
Show comments