Select Your Language

Notifications

webdunia
webdunia
webdunia
webdunia

ಸನ್ನಡತೆ ಆಧಾರದಲ್ಲಿ ಜೈಲಿನಿಂದ ಕೈದಿಗಳ ರಿಲೀಸ್

ಸನ್ನಡತೆ ಆಧಾರದಲ್ಲಿ ಜೈಲಿನಿಂದ ಕೈದಿಗಳ ರಿಲೀಸ್
ಕಲಬುರಗಿ , ಶುಕ್ರವಾರ, 5 ಅಕ್ಟೋಬರ್ 2018 (17:47 IST)
‌ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ರಾಜ್ಯಾದ್ಯಂತ 45 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ‌ ಮಾಡಲಾಯಿತು. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಧೀಶ ಜಗದೀಶ, ಜೈಲರ್ ಕೃಷ್ಣಕುಮಾರ ಸಮ್ಮಖದಲ್ಲಿ ಕೈದಿಗಳಾದ ವೆಂಕಟೇಶ್ ಆಂದೋಲಾ, ನರಸಪ್ಪ ಯಲಮೂರ, ಖಲಿಂದರ್ ಮಸ್ಕಿಂರನ್ನ ಬಿಡುಗಡೆ ಮಾಡಲಾಯಿತು.

2012ರಲ್ಲಿ ಸ್ವಂತ ಅಣ್ಣನ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ್ ಜೈಲು ಸೇರಿದ್ದರೆ, 2012ರಲ್ಲಿ ನರಸಪ್ಪ ಮಗನ ಕೊಲೆ ಮಾಡಿ ಜೈಲು ಸೇರಿದ್ದ. ಈ ಇಬ್ಬರು ಕೈದಿಗಳಿಗೆ ಹತ್ತು ವರ್ಷ ಶಿಕ್ಷೆಯಾಗಿದ್ದು, ಈಗಾಗಲೇ ತಲಾ 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.‌ ಮತ್ತೋರ್ವ ಕೈದಿ ಖಲಿಂದರ್ ಎರಡು ವರ್ಷಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಸನ್ನಡತೆ ಆಧಾರದ ಮೇಲೆ ಈಗ ಈ ಮೂವರು ಬಿಡುಗಡೆಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿವೇಕಾನಂದರ ಚಿಕ್ಯಾಗೊ ಉಪನ್ಯಾಸಕ್ಕೆ 125 ವರ್ಷ: ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ?