ಕಾರ್ಕಳ: ಪ್ರಿಯಕರನ ಜತೆ ಸೇರಿ ಪತಿ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಆರೋಪಿ ಪತ್ನಿ ಪ್ರತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಂಚಾರಿ ಪೀಠದ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಪ್ರತಿಮಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ಚಂದ್ರ ಶೆಟ್ಟಿ ಅವರು ಈ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಸಮೀವುಲ್ಲಾ ಅವರು ಜಾಮೀನು ಮಂಜೂರು ಮಾಡಲು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರತಿಭಾ ಬಾಯ್‌ಫ್ರೆಂಡ್ ದಿಲೀಪ್ ಹೆಗ್ಡೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಇದರಿಂದ ಈ ಪ್ರಕರಣದ ಇಬ್ಬರೂ ಆರೋಪಗಳಿಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಏನಿದು ಪ್ರಕರಣ: ಕಾರ್ಕಳ ತಾಲೂಕಿನ ಅಜೆಕಾರ್‌ನ ಮರ್ನೆ ಗ್ರಾಮದ ನಿವಾಸಿ ಬಾಲಕೃಷ್ಣ (44) ಅವರ ಪತ್ನಿ ಪ್ರತಿಮಾ ಅವರು ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ತನ್ನ ಪತಿಗೆ ಸ್ಲೊ ಪಾಯ್ಸನ್ ಹಾಕಿದ್ದರಿಂದ ಸಾವನ್ನಪ್ಪಿದ್ದರು. ಅಕ್ಟೋಬರ್ 20ರಂದು ಬಾಲಕೃಷ್ಣ ಸಾವನ್ನಪ್ಪಿದರು. ಪ್ರತಿಮಾ ಸಹೋದರನಿಂದಾಗಿ ಇದು ಸಹಜ ಸಾವಲ್ಲ, ಕೊಲೆ ಪ್ರಕರಣವೆಂದು ತಿಳಿದುಬಂತು.
ಈ ಪ್ರಕರಣದಲ್ಲಿ ಪ್ರತಿಮಾ ಹಾಗೂ ಆಕೆಯ ಪ್ರಿಯತಮ ದಿಲೀಪ್ ಹೆಗ್ಡೆ ಜೈಲಿನಲ್ಲಿದ್ದಾರೆ.