Publish Date: Tue, 23 Aug 2022 (09:46 IST)
Updated Date: Tue, 23 Aug 2022 (09:49 IST)
ಮೈಸೂರು : ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ನಾನಾ ಕ್ರಿಮಿನಲ್ ಐಡಿಯಾಗಳನ್ನು ಮಾಡಿ ಮುಗ್ದ ಜನರಿಂದ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಅದರಂತೆಯೇ ಇಲ್ಲೊಬ್ಬ ಅಪರಿಚಿತ ಯುವತಿ ಯುವಕನೊಬ್ಬನಿಗೆ ವೀಡಿಯೋ ಕಾಲ್ ಮಾಡಿ, ಬಳಿಕ ಅದರ ರೆಕಾರ್ಡ್ಗಳನ್ನು ಇಟ್ಟುಕೊಂಡು ಹಣಕ್ಕಾಗಿ ಡಿಮಾಂಡ್ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಯುವಕ ವಾಸುವಿಗೆ ಭಾನುವಾರ ಬೆಳಗ್ಗೆ ಯುವತಿಯೊಬ್ಬಳಿಂದ ವೀಡಿಯೋ ಕಾಲ್ ಬಂದಿದೆ. ಆಕೆ ವೀಡಿಯೋ ಕಾಲ್ ಮಾಡುವುದಕ್ಕೂ ಮುನ್ನ ತನ್ನನ್ನು ಅಮೃತ ಎಂದು ಪರಿಚಯ ಮಾಡಿಕೊಂಡು ಚ್ಯಾಟ್ ಮಾಡಿದ್ದಾಳೆ. ಬಳಿಕ ವೀಡಿಯೋ ಕಾಲ್ ಮಾಡುತ್ತಲೇ ನಗ್ನಳಾಗಿದ್ದಾಳೆ.
ಇದರಿಂದ ಕಸಿವಿಸಿಗೊಂಡ ವಾಸು ತಕ್ಷಣವೇ ವೀಡಿಯೋ ಕಾಲ್ ಅನ್ನು ಕಟ್ ಮಾಡಿದ್ದಾನೆ. ಆದರೆ ಬಳಿಕ ಅದೇ ವೀಡಿಯೋ ಕಾಲ್ನ ರೆಕಾರ್ಡ್ ಇಟ್ಟುಕೊಂಡು ಯುವತಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದಾಳೆ.