Select Your Language

Notifications

webdunia
webdunia
webdunia
webdunia

ಕಣ್ಣಲ್ಲಿ ಗುರು ಗ್ರಹದ ರಹಸ್ಯ ಏನು?

ಕಣ್ಣಲ್ಲಿ ಗುರು ಗ್ರಹದ ರಹಸ್ಯ ಏನು?
ವಾಷಿಂಗ್ಟನ್ , ಮಂಗಳವಾರ, 23 ಆಗಸ್ಟ್ 2022 (09:32 IST)
ವಾಷಿಂಗ್ಟನ್ : ಇತ್ತೀಚೆಗಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ `ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮತ್ತೊಂದು ಮೋಡಿಮಾಡುವಂತಹ ಚಿತ್ರವನ್ನು ಸೆರೆಹಿಡಿದಿದೆ.

ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ನಕ್ಷತ್ರಪುಂಜದ ಚಿತ್ರವನ್ನು ಸೆರೆ ಹಿಡಿದು ತನ್ನ ಬ್ಲಾಗ್ನಲ್ಲಿ ಪ್ರಕಟಿಸಿತ್ತು. ಇದೀಗ ಗುರು ಗ್ರಹದ ಚಿತ್ರಗಳನ್ನು ಸೆರೆ ಹಿಡಿದು ಅಚ್ಚರಿ ಮೂಡಿಸಿದೆ. ಅಲ್ಲದೇ ವಿಜ್ಞಾನಿಗಳಿಗೆ ಗುರುಗ್ರಹದ ಒಳನೋಟಗಳ ಬಗ್ಗೆ ತನ್ನ ಬ್ಲಾಗ್ಪೋಸ್ಟ್ನಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ. 

ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.

ಇದರಿಂದ ಗುರು ಗ್ರಹ ಇಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಹಾಗೂ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ನಾಸಾ ಉಲ್ಲೇಖಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗೆ ವೀಸಾ ನೀಡಲು ಮುಂದಾದ ಚೀನಾ