Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಕುಟುಂಬದಿಂದ ಒತ್ತಾಯ ಬಂದರೆ ಸಿಬಿಐ ತನಿಖೆಗೆ ವಹಿಸಲು ಸಿದ್ಧ: ಸಿದ್ದರಾಮಯ್ಯ

ಗೌರಿ ಲಂಕೇಶ್ ಕುಟುಂಬದಿಂದ ಒತ್ತಾಯ ಬಂದರೆ ಸಿಬಿಐ ತನಿಖೆಗೆ ವಹಿಸಲು ಸಿದ್ಧ: ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 7 ಸೆಪ್ಟಂಬರ್ 2017 (13:03 IST)
ಕುಟುಂಬ ವರ್ಗದವರಿಂದ ಒತ್ತಾಯ ಕೇಳಿಬಂದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಿಬಿಐ ತನಿಖೆಗೆ ವಹಿಸುವುದೇ ಇಲ್ಲವೆಂದು ನಾವು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕುಟುಂಬ ವರ್ಗದವರ ಜೊತೆ ನಿನ್ನೆ ಮಾತನಾಡಿದ್ದೇನೆ. ಒತ್ತಾಯ ಕೇಳಿ ಬಂದರೆ ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ಅವರು ಹೇಳಿದ್ದಾರೆ. ಇತ್ತ, ನಿನ್ನೆಯಿಂದಲೂ ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡುತ್ತಿರುವ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದನ್ನ ಇಲ್ಲಿ ಗಮನಿಸಬಹುದು.

ಈ ಮಧ್ಯೆ, ದಿಟ್ಟ ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆ ಪ್ರಕರಣ ರಾಜಕೀಯವಾಗು ದುರ್ಬಳಕೆಯಾಗುತ್ತಿರುವ ಸೂಚನೆ ಸಿಕ್ಕಿದೆ. ತಮ್ಮ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಸಂಘ ಪರಿವಾರದ ಅವಹೇಳನ ಮಾಡದಿದ್ದರೆ ಹತ್ಯೆಯಾಗುತ್ತಿರಲಿಲ್ಲ ಎಂದು ಬಿಜೆಪಿ ಶಾಸಕ ಜೀವರಾಜ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಶಾಸಕರ ಈ ಹೇಳಿಕೆಯ ಅರ್ಥವೇನು..? ಹತ್ಯೆ ಹಿಂದೆ ಯಾರಿದ್ದಾರೆಂಬುದು ಇದರಿಂದ ಅರ್ಥವಾಗುವುದಿಲ್ಲವೇ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಪತ್ತೆಯಾಗಿದ್ದ ಸೋನಿಯಾ ಗಾಂಧಿ ಎಸ್`ಪಿಜಿ ಕಮಾಂಡೋ ಪತ್ತೆ