ಪ್ರೀತಿಸುವದಾಗಿ ನಂಬಿಸಿ ಕೈ ಕೊಟ್ಟ ಪ್ರಿಯಕರ ಬೇರೆ ಹುಡುಗಿ ಜತೆ ಮದುವೆಗೆ ರೆಡಿ

ಮಂಗಳವಾರ, 4 ಡಿಸೆಂಬರ್ 2018 (19:51 IST)
ಮೂರು ವರ್ಷಗಳ ಕಾಲ ಯುವತಿಯೊಬ್ಬಳನ್ನು ಪ್ರೀತಿಸಿ ಈಗ ಮತ್ತೊಂದು ಯುವತಿಯೊಂದಿಗೆ ಯುವಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾನೆ ಎಂದು ಯುವತಿಯೊಬ್ಬಳು ಆರೋಪ ಮಾಡಿದ್ದಾಳೆ.

ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ದೇವಸ್ಥಾನದಲ್ಲಿ  ನಮ್ಮ ಮದುವೆಯಾಗಿದೆ ಎಂದು ಸವಿತಾ ಬಂಡಿವಡ್ಡರ್ (23) ಎಂಬ ಯುವತಿ ಹೇಳುತ್ತಿದ್ದಾಳೆ. ಯುವಕ ಪರಶುರಾಮ ಹೊಸಪೇಟೆ ಈ ಇಬ್ಬರೂ ಕೂಡಾ ವಿಜಯಪುರ ನಗರದ ವಡ್ಡರ ಓಣಿ ನಿವಾಸಿಗಳಾಗಿದ್ದಾರೆ.

ಕೂಡಲ ಸಂಗಮ ದೇವಸ್ಥಾನದಲ್ಲಿ ನನನ್ನು ಯುವಕ ಮದುವೆಯಾಗಿದ್ದಾನೆ ಎನ್ನುತ್ತಿದ್ದಾಳೆ ಯುವತಿ. 3 ವರ್ಷಗಳಿಂದ ದೈಹಿಕ ಸಂಪರ್ಕ ಮಾಡಿದ್ದಾನೆ ಸವಿತಾ ಆರೋಪ ಮಾಡುತ್ತಿದ್ದಾಳೆ.

ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾಳೆ. 
ಮಾಜಿ ಸಚಿವ ಅಪ್ಪಾಸಾಹೇಬ್ ‌ಪಟ್ಟಣಶೆಟ್ಟಿ‌ ನೇತೃತ್ವದಲ್ಲಿಯೂ ಸಂಧಾನ ನಡೆದಿದೆ ಎನ್ನುತ್ತಿರುವ ಯುವತಿ ತನಗೆ ನ್ಯಾಯ ಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾಳೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಕೆ.ಡಿ.ಎ. ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ