Select Your Language

Notifications

webdunia
webdunia
webdunia
webdunia

ಯುವತಿ ಕಣ್ಮುಂದೆಯೇ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

ಯುವತಿ ಕಣ್ಮುಂದೆಯೇ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ
ಬೆಂಗಳೂರು , ಶನಿವಾರ, 1 ಡಿಸೆಂಬರ್ 2018 (14:39 IST)
ಪ್ರೀತಿ ನಿರಾಕರಿಸಿದ್ದಕ್ಕೆ  ಪ್ರಿಯತಮೆ ಎದುರಲ್ಲೇ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಾಗಲ್ ಪ್ರೇಮಿ  ಯುವತಿಯ ಕಣ್ಣ ಮುಂದೆಯೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಐದನೆ ಮಹಡಿಯಿಂದ ಮೂರನೆ ಮಹಡಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಯುವಕ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯುವಕನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಹೈದ್ರಾಬಾದ್ ಮೂಲದ ರೊಷನ್(23) ಸಾವಿಗೀಡಾದ ಪ್ರೇಮಿಯಾಗಿದ್ದಾನೆ. ಹೆಚ್ ಎಸ್ ಆರ್ ಲೇಔಟ್ ನಲ್ಲಿ  ಐ ಟಿ  ಕಂಪನಿಯಲ್ಲಿ ಟೆಕ್ಕಿಯಾಗಿದ್ದ ರೋಷನ್, ಅದೇ ಕಂಪನಿಯ ಮುಸ್ಲಿಂ ಯುವತಿಯನ್ನು ಪ್ರೀತಿಸುತಿದ್ದ. ಪದೆ ಪದೇ ಪ್ರೀತಿಸು ಎಂದು ಪೀಡಿಸುತಿದ್ದನು. ಅದ್ರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಧರ್ಮ ಬೇರೆ ಜೊತೆಗೆ ನಾನು ನಿನ್ನ ಪ್ರೀತಿಸುವುದಿಲ್ಲಾ ಎಂದಿದ್ದಳು. ನಂತ್ರ ಯುವಕನ ಕಾಟ ತಾಳಲಾರದೆ ಕೆಲಸವನ್ನು ಯುವತಿ ಬಿಟ್ಟಿದ್ದಳು.

ಅದೇ ಬಿಲ್ಡಿಂಗ್ ನ ಮೂರನೆ ಮಹಡಿಯ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಈ ಕುರಿತು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಮನಸೆಳೆದ ಎಚ್ ಐ ವಿ ಜಾಗೃತಿ ಜಾಥಾ