ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸೋದಾಗಿ ಹೇಳಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರು ವಾಗ್ದಾಳಿ, ಆರೋಪ ಮುಂದುವರಿಸಿದ್ದಾರೆ.
									
										
								
																	
ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡುವುದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಬೆಸ್ಕಾಂನಿಂದ ಅನುಮತಿ ಪಡೆಯದೇ ದೂರದಿಂದ ಲೈನ್ ಎಳೆಯಲಾಗಿದೆ. ಟ್ರಸ್ಟ್ ಡೀಡ್ ನಲ್ಲಿ ಆಸ್ಪತ್ರೆ, ಶಾಲೆ ನಿರ್ಮಿಸೋದಾಗಿ ಹೇಳಿ ಇದೀಗ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
									
			
			 
 			
 
 			
			                     
							
							
			        							
								
																	ಹಿಗಂತ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ವರದಿ ತರಿಸಿಕೊಂಡ ಬಳಿಕ ಸಿಎಂ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಅಂತ ಅಶೋಕ್ ಹೇಳಿದ್ದಾರೆ.