Select Your Language

Notifications

webdunia
webdunia
webdunia
webdunia

ರವಿ ಡಿ ಚನ್ನಣ್ಣನವರ ಬಿಡುಗಡೆ ಮಾಡ್ತಾರೆ ಯರ್ರಾಬಿರ್ರಿ ಆಡಿಯೋ

ರವಿ ಡಿ ಚನ್ನಣ್ಣನವರ ಬಿಡುಗಡೆ ಮಾಡ್ತಾರೆ ಯರ್ರಾಬಿರ್ರಿ ಆಡಿಯೋ
ಹುಬ್ಬಳ್ಳಿ , ಶನಿವಾರ, 28 ಸೆಪ್ಟಂಬರ್ 2019 (17:56 IST)
ಡಿಸಿಸಿಯ ಯರ್ರಾಬಿರ್ರಿ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.

ಬೆಂಗಳೂರಿನ ಡಿಸಿಸಿಯ ಯರ್ರಾಬಿರ್ರಿ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಸೆ.29 ರಂದು ಬೆಳಿಗ್ಗೆ 10 ಕ್ಕೆ ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಹೀಗಂತ ಹೆಚ್.ಜಿ.ದಾಸರ ಹೇಳಿದ್ರು.

    ಡಿಸಿಸಿ ಮೂಲತಃ ಧಾರವಾಡದ ಕಂಪನಿಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದವರನ್ನೇ ಸೇರಿಸಿಕೊಂಡು ಮಾಡಿದ ಚಿತ್ರ ಯರ್ರಾಬಿರ್ರಿ. ನಟ ತನ್ನ ಬಂಧು-ಬಳಗವನ್ನು ರಕ್ಷಿಸಲು ಯಾವ ರೀತಿಯಾಗಿ ನಡೆದುಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರದ ಬಹುತೇಕ ಚಿತ್ರೀಕರಣವನ್ನು ಉತ್ತರ ಕರ್ನಾಟಕದಲ್ಲಿಯೇ ಮಾಡಲಾಗಿದ್ದು, ಯರ್ರಾಬಿರ್ರಿ ಮಾಸ್ ಚಿತ್ರವಾಗಿದೆ. ಚಿತ್ರಕ್ಕೆ ಸಂಗೀತವನ್ನು ಚುಟು ಚುಟು ಹಾಡಿನ ಶಿವು ಬ್ಯಾಡಗಿ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಿವೆ. ಚಿತ್ರದ ಬಹುತೇಕ ಹಾಡುಗಳನ್ನು ಉತ್ತರ ಕರ್ನಾಟಕದಲ್ಲಿಯೇ ಚಿತ್ರಿಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುತ್ತಿದೆ‌ ಎಂದ್ರು.

  ಐಪಿಎಸ್  ಅಧಿಕಾರಿ ರವಿ ಡಿ ಚನ್ನಣ್ಣವರ ಆಡಿಯೋ ಬಿಡುಗಡೆಗೊಳಿಸುವರು.  




Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರನ್ನ ಇಂಪ್ರೆಸ್ ಮಾಡಲು ಹೋಗಿ ಜೈಲು ಪಾಲಾದರು