Select Your Language

Notifications

webdunia
webdunia
webdunia
webdunia

ಪಡಿತರ ಧಾನ್ಯ: ಮಾಫಿಯಾ ಅಡ್ಡೆ ಮೇಲೆ ಡಿಸಿ ದಾಳಿ

ಪಡಿತರ ಧಾನ್ಯ: ಮಾಫಿಯಾ ಅಡ್ಡೆ ಮೇಲೆ ಡಿಸಿ ದಾಳಿ
ಬೀದರ್ , ಶನಿವಾರ, 6 ಅಕ್ಟೋಬರ್ 2018 (15:02 IST)
ದಶಕಗಳಿಂದ ಗಡಿನಾಡಿನ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಪಡಿತರ ಧಾನ್ಯದ ಮಾಫೀಯಾ ಅಡ್ಡೆಗಳನ್ನು ಒಂದೊಂದಾಗಿ ಹೆಡೆಮುರಿ ಕಟ್ಟುತ್ತಿರುವ ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ದಾಳಿ ವೇಳೆ ಸಿಕ್ರೇಟ್ ಡೈರಿ ದೊರೆತಿರುವುದು ಕುತೂಹಲ ಮೂಡಿಸಿದೆ.

ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ನೇತೃತ್ವದ ಅಧಿಕಾರಿಗಳ ತಂಡ ಮತ್ತೊಂದು ದಾಳಿ ಮಾಡಿದ್ದು ದಾಳಿ ವೇಳೆಯಲ್ಲಿ ಸಿಕ್ರೇಟ್ ಡೈರಿಯೊಂದು ಪತ್ತೆಯಾಗಿದೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ಬೀದರ್ ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ಭಾಗದಲ್ಲಿ ದಾಳಿ ಮಾಡಿರುವ ಜಿಲ್ಲಾಡಳಿತ ತಡ ರಾತ್ರಿ ಎಸ್.ಪಿ ಟಿ ಶ್ರೀಧರ ನೇತೃತ್ವದ ಪೊಲೀಸರ ತಂಡ, ನಗರದ ಗಾಂಧಿಗಂಜ ಮಾರುಕಟ್ಟೆ ವ್ಯಾಪ್ತಿಯ ಗೋದಾಮಿನ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ಪಡಿತರ ಅಕ್ಕಿ, ಗೋಧಿ, ಕಾಳು, ಕೊಬ್ಬರಿ ಪತ್ತೆ ಹಚ್ಚಿದ್ದಾರೆ. ಗುಜರಾತ್ ರಾಜ್ಯಕ್ಕೆ ಲೋಡ್ ಮಾಡಿ ಕಳುಹಿಸುತ್ತಿದ್ದ ಲಾರಿಯೊಂದನ್ನು ರೇಡ್ ಹ್ಯಾಂಡ್ ಆಗಿ ಜಪ್ತಿ ಮಾಡಿಕೊಂಡ ಪೊಲೀಸರು ತೀವ್ರ ತನಿಖೆ ನಡೆಸಿದಾಗ ಅಕ್ಕಿ ಮಾಫೀಯಾದ ಜಾಲ ಪತ್ತೆಯಾಗಿದೆ.

ಇನ್ನೂ ದಾಳಿ ವೇಳೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಸ್ಥರಿಗೆ ನೀಡುವ ಸಿಕ್ರೇಟ್ ಡೈರಿಯೊಂದು ಪತ್ತೆಯಾಗಿದೆ ಎನ್ನಲಾಗಿದ್ದು, ದಶಕಗಳಿಂದ ಬಡವರ ಹೊಟ್ಟೆಗೆ ಸೇರಬೇಕಾದ ಪಡಿತರ ಧಾನ್ಯವನ್ನು ಅಕ್ರಮವಾಗಿ ಮಾರಾಟ ಮಾಡಿ ಮಾಫೀಯಾವಾಗಿ ಅಟ್ಟಹಾಸ ಮೆರೆಯುತ್ತಿದ್ದ ಜಾಲವೊಂದು ಪತ್ತೆಯಾಗಿದೆ ಎನ್ನಲಾಗಿದೆ.  ಈ ಮಾಫೀಯಾದ ಹೆಡೆಮುರಿ ಕಟ್ಟಲು ಜಿಲ್ಲಾಧಿಕಾರಿಗಳಿಗೆ ಡೈರಿ ಪೂರಕವಾಗಲಿದೆ ಎಂಬ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಪೌರ ಕಾರ್ಮಿಕರಿಗೆ ಪೊರಕೆ ಹಿಡಿದು ಸಾಥ್ ನೀಡಿದ ಶಾಸಕ