Select Your Language

Notifications

webdunia
webdunia
webdunia
webdunia

ಅಮೂಲ್ಯ ಲೋಹಗಳ ನಿಕ್ಷೇಪಗಳ ಶೋಧನೆ

Cm
ಕೇಂದ್ರ ಸರಕಾರ ದೇಶದಲ್ಲಿರುವ ಅಮೂಲ್ಯ ಲೋಹಗಳ ನಿಕ್ಷೇಪಗಳ ಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ದೇಶದಲ್ಲಿ ಸುಮಾರು 900 ಟನ್‌ ಗಳಷ್ಟು ಬಂಗಾರದ ಲೋಹದ ನಿಕ್ಷೇಪ ಇರುವ ಅಂದಾಜಿದ್ದು ಅದರ ಜೊತೆಗೆ ಕಾಪರ್‌, ಅಲ್ಯೂಮಿನಿಯಂ ನ ನಿಕ್ಷೇಪಗಳ ಶೋಧನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್‌ ಜೋಶಿ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಜ್ಯುವೆಲರ್ ಅಸೋಸಿಯೇಷನ್ ಆಫ್ ಬೆಂಗಳೂರು ಸಹಯೋಗದಲ್ಲಿ ಜಿಇಎಸ್‌ ಇಂಡಿಯಾ ಮಾರ್ಚ್‌ 4 ರಿಂದ 6 ರ ವರೆಗೆ ಆಯೋಜಿಸಿರುವ ಸೌತ್‌ ಜ್ಯೂಯೆಲ್ಲರಿ ಶೋನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 
ಆಭರಣ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಕ್ಷೇತ್ರಗಳಲ್ಲೊಂದಾಗಿದೆ. ಈ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಹೆಚ್ಚಿನ ಕೌಶಲ್ಯತೆಯ ಅಗತ್ಯತೆ ಇದೆ. ಸಾಂಪ್ರದಾಯಿಕ ಆಭರಣಗಳ ತಯಾರಿಕೆಯಲ್ಲಿರುವ ಬಹಳಷ್ಟು ಜನರು ತಮ್ಮ ಅನುಭವದಿಂದ ಕೌಶಲ್ಯತೆಯನ್ನು ಪಡೆದುಕೊಂಡಿದ್ದಾರೆ. ದೇಶ ವಿದೇಶದಲ್ಲಿ ನಮ್ಮ ದೇಶಧ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗೊಳ್ಳಲು ವಿಫುಲ ಅವಕಾಶವಿದೆ. ಈ ಹಿನ್ನಲೆಯಲ್ಲಿ ಯುವ ಜನಾಂಗ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೈಬರ್ ಹ್ಯಾಕ್ ಮಾಡಿದ ಯೂರೋಪ್!