ಈಗಾಗಲೇ ಕೊರೋನಾ ಮೂರನೇ ಅಲೆಯ (Covid 3rd Wave) ತೀವ್ರತೆ ಬಹುತೇಕ ನಿಂತೇ ಹೋಗಿದೆ. ಆದಾಗ್ಯೂ ಎರಡನೇ ಅಲೆಯ ನಂತರ ಮೂರನೇ ಅಲೆಯ ಸುಳಿವು ದೊರೆತಾಗ ಎಲ್ಲೆಡೆಯೂ ಆತಂಕದ ಛಾಯೆ ಮನೆ ಮಾಡಿತ್ತು, ಕಾರಣ ಮೂರನೇ ಅಲೆಯ ತೀವ್ರತೆ ಹಾಗೂ ಅದು ಮನುಕುಲಕ್ಕೆ ಮಾಡಬಹುದಾದ ಭೀಕರ ಪ್ರಹಾರ.
 
									
			
			 
 			
 
 			
			                     
							
							
			        							
								
																	
	ಕೋವಿಡ್-19 ವಿರುದ್ಧ ನೀಡಲಾದ ಲಸಿಕೆಯಲ್ಲಿರುವ ಆಂಟಿಬಾಡಿಗಳು (ಪ್ರತಿರೋಧಕ ತತ್ವಗಳು) ಯಾವ ರೀತಿ ರಕ್ಷಣೆ ನೀಡುತ್ತವೆ ಎಂಬುದನ್ನು ತಿಳಿಸುವ ಅಧ್ಯಯನವೊಂದು ಹೊರಬಿದ್ದಿದೆ. ಭಾರತದ ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC Bengaluru) ಹಾಗೂ ಆಸ್ಟ್ರೇಲಿಯಾ ಮೂಲದ ಕ್ವೀನ್ಸ್ ಲ್ಯಾಂಡ್ ಬ್ರೈನ್ ಇನ್ಸ್ಟಿಟ್ಯೂಟ್ ಸಮಗ್ರವಾಗಿ ಅಧ್ಯಯನ ಮಾಡಿ ಗಣಿತದ ಮಾದರಿಯೊಂದನ್ನು ಅಭಿವೃದ್ಧಿಪಡಿಸಿವೆ.
 
									
										
								
																	
	 
	ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆ (Covid Vaccine) ತೆಗೆದುಕೊಳ್ಳುವಿಕೆ ತೀವ್ರವಾದ ಗತಿ ಪಡೆದು ಬಹಳಷ್ಟು ಜನರು ಲಸಿಕೆ ಪಡೆದರು. ತದನಂತರ ಅಪ್ಪಳಿಸಿದ ಮೂರನೇ ಅಲೆ ಈ ಹಿಂದೆ ಅಂದುಕೊಂಡಂತೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡಲೆ ಇಲ್ಲ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.