ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ರಾಜ್ಯ ಬಜೆಟ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಯಾವಾಗ ಆರಂಭಿಸ್ತೀರಾ..?
ಪರಿಸರ ಕ್ಲಿಯರೆನ್ಸ್ ಯಾವಾಗ..? ಟೆಂಡರ್ಅನ್ನು ಯಾವಾಗ ಹೊರಡಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ಬಜೆಟ್ ಸಂವಿಧಾನ ವಿರುದ್ಧವಾಗಿದೆ. ಅಲ್ಪಸಂಖ್ಯಾತರನ್ನ ನೋಡ್ತಿರುವ ದೃಷ್ಟಿ ಬೇರೆಯಾಗಿದೆ. ನಾವು ೩೦೦೦ ಕೋಟಿ ಹಣ ಮೀಸಲಿಟ್ಟಿದ್ದೆವು. ಆದರೆ ನೀವು ಅವರ ಕಲ್ಯಾಣಕ್ಕೆ ಕೊಟ್ಟಿರುವ ಹಣವೆಷ್ಟು..? ಜೈನ,ಬೌದ್ಧ,ಸಿಖ್ ಸಮುದಾಯಕ್ಕೆ ಕೊಟ್ಟ ಹಣ ಸಾಕೇ..?ಎಸ್ಸಿ,ಎಸ್ಟಿ,ಒಬಿಸಿಗೆ ಹೆಚ್ಚಿನ ಹಣ ಇಡಲಾಗಿತ್ತು. ನೀವು ಅವರ ಎಲ್ಲಾ ಅನುದಾನ ಕಡಿತ ಮಾಡಿದ್ದೀರ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.