Select Your Language

Notifications

webdunia
webdunia
webdunia
webdunia

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಕಾಮುಕರು ಅಂದರ್

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಕಾಮುಕರು ಅಂದರ್
ಬಾಗಲಕೋಟೆ , ಬುಧವಾರ, 10 ಅಕ್ಟೋಬರ್ 2018 (13:17 IST)
ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮಾದಾಪೂರ ಗ್ರಾಮದಲ್ಲಿ ವಿವಾಹಿತಳ ಮೇಲೆ ಅತ್ಯಾಚಾರ ನಡೆದಿದೆ.

ಅಕ್ಟೋಬರ್ 4 ರಂದು ಬಹಿರ್ದೆಸೆಗೆ ಅಂತ ತೆರಳಿದ ವೇಳೆ, ಅತ್ಯಾಚಾರ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವಿಠ್ಠಪ್ಪ ಚನ್ನಗೌಡರ ಎಂಬಾತ ಅತ್ಯಾಚಾರ ಎಸಗಿದ್ದ ಎಂದು ಸಂತ್ರಸ್ಥ ಮಹಿಳೆ ಅಮಿನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅತ್ಯಾಚಾರಕ್ಕೆ ಧರ್ಮಣ್ಣ ಹೂಲಿಕೇರಿ ಹಾಗೂ ಬಸಪ್ಪ ಚಳ್ಳಿಕೇರಿ ಎಂಬುವರು ಸಹಾಯ ಮಾಡಿದ್ದು, ಅವ್ರ ಮೇಲೆಯೂ ಸಹ ಪ್ರಕರಣ ದಾಖಲಾಗಿದೆ.

ಸದ್ಯ ಅತ್ಯಾಚಾರಿ ವಿಠ್ಠಪ್ಪ ಚನ್ನಗೌಡರ ಹಾಗೂ ಆತನಿಗೆ ಸಹಾಯ ಮಾಡಿರೊ ಬಸಪ್ಪ ಚಳ್ಳಿಕೇರಿ ಎಂಬುವರನ್ನ  ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನು ಪ್ರಕರಣದ ಮತ್ತೋರ್ವ  ಆರೋಪಿಯಾಗಿರುವ ಧರ್ಮಣ್ಣ ಹೂಲಿಕೇರಿಗಾಗಿ ಅಮಿನಗಡ ಪೊಲೀಸ್ರು ಹುಡುಕಾಟ ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರೂಪಾಯಿ ಮೌಲ್ಯ ಕುಸಿತ; ಸಮಸ್ಯೆ ಪರಿಹರಿಸಲು ಆರ್.ಬಿ.ಐ ಹೊಸ ಪ್ಲಾನ್