Publish Date: Sun, 19 Mar 2023 (14:52 IST)Updated Date: Sun, 19 Mar 2023 (14:59 IST)
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಸಮಯಕ್ಕೆ ಒಂದೇ ಸ್ಥಳದಲ್ಲಿ ಕಾಂಗ್ರೆಸ್ ಬಿಜೆಪಿ ಯಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ.ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರ ಕಾಂಗ್ರೆಸ್ ಫ್ರೀ ಯೋಜನೆ ಗಳ ಕುರಿತು ನೂರಾರು ಆಟೋಗಳು ಕ್ಯಾಂಪೇನ್ ಮೂಲಕ ಪ್ರಚಾರ ನಡೆಸಲಾಗಿದೆ.
ಇತ್ತ ಬಿಜೆಪಿಯಿಂದಲೂ ವಿಜಯ ಸಂಕಲ್ಪ ರಥಯಾತ್ರೆಯನ್ನ ಶ್ರೀರಾಮಪುರದ ಆಂಜನೇಯ ದೇವಸ್ಥಾನದಿಂದ ಸಿದ್ದತೆ ಮಾಡಿಕೊಂಡಿದ್ದು,ಇಬ್ಬರು ತಾ ಮುಂದು ನಾ ಮುಂದು ಎಂದು ಅಬ್ಬರದ ಪ್ರಚಾರ ಮಾಡ್ತಿದ್ದಾರೆ.ಇವರಿಬ್ಬರ ಪ್ರಚಾರದಿಂದ ವಾಹನ ಸವಾರರು ಕಿರಿಕಿರಿ ಅನುಭವುಸುವಂತಾಗಿತ್ತು.