Select Your Language

Notifications

webdunia
webdunia
webdunia
webdunia

ವಿಜ್ಞಾನದ ಲಾಭ ಜನರನ್ನು ತಲುಪಲಿ: ಸಿಎಂ ಬೊಮ್ಮಾಯಿ ಆಶಯ

ವಿಜ್ಞಾನದ ಲಾಭ ಜನರನ್ನು ತಲುಪಲಿ: ಸಿಎಂ ಬೊಮ್ಮಾಯಿ ಆಶಯ
bangalore , ಭಾನುವಾರ, 19 ಮಾರ್ಚ್ 2023 (14:35 IST)
ಸಂಜಯನಗರದಲ್ಲಿರುವ ಸೈನ್ಸ್​ ಗ್ಯಾಲರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟನೆ ಮಾಡಿದ್ದಾರೆ.ಬೆಂಗಳೂರು ಸೈನ್ಸ್ ಗ್ಯಾಲರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿಜ್ಞಾನ ಮತ್ತು ಆಧ್ಮಾತ್ಮ ಒಂದೇ ನಾಣ್ಯದ ಎರಡು ಮುಖ. ತತ್ವಶಾಸ್ತ್ರ, ಆಧ್ಯಾತ್ಮ ಎಲ್ಲದರಲ್ಲೂ ವಿಜ್ಞಾನದ ಅಂಶಗಳು ಹೆಚ್ಚಾಗಿದೆ. ನಾವು ಈಗ ಸಂಶೋಧಿಸಿರುವುದು ಕೇವಣ‌ ಸಣ್ಣ ಭಾಗ. ವಿಜ್ಞಾನದಲ್ಲಿ ಸಂಶೋಧನೆಗೆ ಇನ್ನೂ ಸಾಕಷ್ಟು ಜಾಗ ಇದೆ. ಆರ್​​ಎನ್​ಡಿ ಬಗ್ಗೆ ಪಾಲಿಸಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಮಾನವನ ಮೆದುಳು ಇನ್ನೂ 75% ನಷ್ಟು ವಿಸ್ಕೃತವಾಗಬೇಕಿದೆ. ಕೇವಲ 25% ಮೆದುಳುನ್ನು ಬಳಸಿಕೊಂಡು ಮನುಷ್ಯ ಇಷ್ಟೆಲ್ಲಾ ಅದ್ಬುತ ಸೃಷ್ಟಿ ಮಾಡಿದ್ದಾನೆ. 100% ಮೆದುಳನ್ನು ಮನುಷ್ಯ ಉಪಯೋಗಿಸಿದರೆ ಏನೆಲ್ಲಾ‌ ಸೃಷ್ಟಿಸಬಹದು. ಸೈನ್ಸ್ ಗ್ಯಾಲರಿ ಕೂಡ ಅದೇ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವ್ಯಕ್ತಿಯ ವೈಯಕ್ತಿಕ ವಿಕಸನಕ್ಕೆ ಸಹಾಯವಾಗಬೇಕು.ಆರ್​ಎನ್​ಡಿ ಎಕೋ‌ ಸಿಸ್ಟಮ್, ಏರೋಸ್ಪೇಸ್ ಎಲ್ಲದರಲ್ಲೂ ಕೂಡ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯ,ದೇಶ, ವಿಶ್ವದೆಲ್ಲೆಡೆ ಸೈನ್ಸ್ ಗ್ಯಾಲರಿಯ ಅನುಕೂಲವಾಗಲಿ. ಸಾಮಾನ್ಯ ವ್ಯಕ್ತಿಯೊಬ್ಬ ಸೈನ್ಸ್ ಗ್ಯಾಲರಿ ಪ್ರವೇಶಿಸಿ ವಿಜ್ಞಾನದ ಜ್ಞಾನ ಪಡೆದು ಹೊರ ಹೋಗುವಂತಾಗಲಿ. ರಾಜ್ಯ ಸರ್ಕಾರ ಎಲ್ಲಾ‌ ಸಹಕಾರ, ಬೆಂಬಲ ‌ನೀಡಲಿದೆ ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬರುವ ಚುನಾವಣೆಗೆ ಭರ್ಜರಿ ತಯಾರಿ