ರಾಜ್ಯದಲ್ಲಿ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಟಿಕೆಟ್ ಗಾಗಿ ಕಿತ್ತಾಟ ಜೋರಾಗಿದೆ.. ಎಲ್ಲಾ ಪಕ್ಷದಲ್ಲಿ ನಡೆದಂತೆ ಇಂದು ಜೆಡಿಎಸ್ ಕಚೇರಿಯಲ್ಲೂ ಕೂಡ ಟಿಕೆಟ್ ವಿಚಾರವಾಗಿ ಹೈಡ್ರಾಮಾವೇ ನಡೆಯಿತು.ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ.. ಮೂರು ಪಕ್ಷಗಳಲ್ಲೂ ಕೆಲವೊಂದು ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಗಲಾಟೆ ಮತ್ತು ಗೊಂದಲಕ್ಕೆ ಕಾರಣವಾಗಿದೆ.. ಅದೇ ರೀತಿ ಜೆಡಿಎಸ್ ಪಕ್ಷದಲ್ಲೂ ಕೂಡ ಟಿಕೆಟ್ ಗಾಗಿ ಕಿತ್ತಾಟ ನಡೆಯುತ್ತಿದೆ.. ಇಂದು ಜೆಪಿ ಭವನದಲ್ಲಿ ಚಾಮರಾಜಪೇಟೆ ಟಿಕೆಟ್ ವಿಚಾರವಾಗಿ ಹೈಡ್ರಾಮಾವೇ ನಡೆಯ್ತು.
ಜೆಪಿ ಭವನದಲ್ಲಿ ಕುಮಾರಸ್ವಾಮಿ ಪಂಚರತ್ನ ಸಮಾರೋಪ ಸಮಾರಂಭ ವಿಚಾರವಾಗಿ ಸಭೆ ಕರೆದಿದ್ರು.. ಈ ಸಭೆಗೆ ಹಲವು ಜೆಡಿಎಸ್ ನಾಯಕರು, ಮುಖಂಡರುಗಳು ಬಂದಿದ್ರು.. ಅದೇ ರೀತಿ ಚಾಮರಾಜಪೇಟೆ ಕಾರ್ಯಕರ್ತರು ಮತ್ತು ನಾಯಕರುಗಳು ಬಂದಿದ್ರು. ಈ ಸಂದರ್ಭದಲ್ಲಿ ಎರಡು ಬಳಗಳ ನಡುವೆ ಕಿರಿಕ್ ನಡೆಯುತ್ತು.ಮೊದಲಿನಿಂದಲೂ ಚಾಮರಾಜಪೇಟೆಯಲ್ಲಿ ಜೆಡಿಎಸ್ ನಿಂದ ಇಮ್ರಾನ್ ಪಾಷ ಸ್ಪರ್ಧೆ ಮಾಡುತ್ತಾರೆ ಎಂದು ಕೇಳಿಬರುತ್ತಿತು. ಆದ್ರೆ ಕೆಲವು ತಿಂಗಳುಗಳ ಹಿಂದೆ ಗೋವಿಂದರಾಜ ಎಂಬುವವರು ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರ್ಪಡೆಯಾಗಿದ್ರು. ಈಗ ಅವರು ಕೂಡ ಆ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂಬ ಚರ್ಚೆಗಳು ನಡೆಯುತ್ತಿದ್ದವು.ಇಂದು ಹೆಚ್‌ಡಿಕೆಯನ್ನು ಭೇಟಿಯಾಗಲು ಗೋವಿಂದರಾಜ ಕಡೆಯವರು ಬಂದಿದ್ರು. ಈ ಸಮಯದಲ್ಲಿ ಇವರನ್ನು ನೋಡಿದ ಇಮ್ರಾನ್ ಪಾಷ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ರು. ಜಮೀರ್ ಜೊತೆ ಜೆಡಿಎಸ್ ಗೆ ಮೋಸ ಮಾಡಿ ಹೋದವರು ನೀವು. ಇಂದು ಜೆಡಿಎಸ್ ಕಚೇರಿಗೆ ಬಂದಿದ್ದೀಯಾ ಎಂದು ಕಿಡಿ ಕಾರಿದ್ರು. ಪರಸ್ಪರ ಉರ್ದುವಿನಲ್ಲಿ ಬೈದಾಡಿಕೊಂಡ ಬೆಂಬಗಲಿಗರು. ಕಿರಿಕ್ ದೊಡ್ಡದಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡು ಕಡೆ ಬೆಂಬಲಿಗರನ್ನು ಹೊರ ಕಳಿಹಿಸಿದ್ರು