Publish Date: Tue, 05 Apr 2022 (17:39 IST)
Updated Date: Tue, 05 Apr 2022 (17:43 IST)
ಬಾಲಿವುಡ್ ಸ್ವೀಟೆಸ್ಟ್ ಕಪಲ್ ಎಂದರೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್. ಇತ್ತೀಚಿನ ಸಂದರ್ಶನವೊಂದರಲ್ಲಿ ಆಲಿಯಾ, ನನ್ನ ದೊಡ್ಡ ವಿಮರ್ಶಕ ರಣಬೀರ್ ಎಂದು ಹೇಳಿ ನಾಚಿ ನೀರಾಗಿದ್ದಾರೆ. ನಾನು ನಂಬುವ ಜನರು ನನ್ನೊಂದಿಗೆ ಹೆಚ್ಚು ಪ್ರಾಮಾಣಿಕವಾಗಿದ್ದಾರೆ. ಅವರ ಅಭಿಪ್ರಾಯವು ನನಗೆ ಹೆಚ್ಚು ಮುಖ್ಯವಾಗಿದೆ. ನನ್ನ ತಪ್ಪಿದ್ದರೂ ಅದನ್ನು ತಪ್ಪು ಎಂದು ಹೇಳುವ ಜನರು ಬೆರಳೆಣಿಕೆಯಷ್ಟು ಇದ್ದಾರೆ. ಅವರು ನನ್ನ ತಪ್ಪನ್ನು ತಪ್ಪು ಎಂದೇ ನೇರವಾಗಿ ಹೇಳುತ್ತಾರೆ. ಅವರು ನನಗಾಗಿ ಶುಗರ್ ಕೋಟ್ ಮಾಡಬೇಕಾಗಿಲ್ಲ. ಅಂತಹವರಲ್ಲಿ ರಣಬೀರ್ ಕಪೂರ್, ಅಯಾನ್ ಮುಖರ್ಜಿ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಸರ್ ಇದ್ದಾರೆ. ಇವರು ಎಂದೂ ಶುಗರ್ ಕೋಟ್ ಹಾಕಿಕೊಂಡು ನನ್ನ ಜೊತೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.