ಮಂಡ್ಯದ ಯೋಧ ಹುತಾತ್ಮನಾದಾಗ ಒಂದು ಮಾತಾಡಲಿಲ್ಲ, ಈಗ್ಯಾಕೆ ಮಾತನಾಡ್ತಿದ್ದೀರಾ? ರಮ್ಯಾಗೆ ಟ್ವಿಟರಿಗರ ಟಾಂಗ್

Webdunia
ಶುಕ್ರವಾರ, 1 ಮಾರ್ಚ್ 2019 (09:19 IST)
ಬೆಂಗಳೂರು: ಭಾರತೀಯ ವಾಯುಸೇನೆ ವಿಂಗ್ ಕಮಾಂಡ್ ಅಭಿನಂದನ್ ಪಾಕ್ ವಶದಲ್ಲಿರುವ ಬಗ್ಗೆ ಪ್ರಧಾನಿ ಮೋದಿಯನ್ನು ಟೀಕಿಸಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾಗೆ ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


‘ಏನಾಯ್ತು ಭಾರತೀಯ ಜೂಟ್ ಪಾರ್ಟಿ? ನಿಮ್ಮ ನಾಯಕರು ಅಷ್ಟೊಂದು ಚಾಣಕ್ಯರಲ್ಲವೇ? ಯಾವಾಗ ನಮ್ಮ ವಿಂಗ್ ಕಮಾಂಡರ್ ಭಾರತಕ್ಕೆ ಮರಳುತ್ತಾರೆಂಬ ಮಾತು ಪ್ರಧಾನಿ ಬಾಯಿಯಿಂದ ಯಾವಾಗ ಬರುತ್ತದೆಂದು ಕೇಳಲು ಕಾಯುತ್ತಿದ್ದೇವೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಟ್ವಿಟರಿಗರು ಆಕ್ರೋಶದಿಂದಲೇ ಪ್ರತಿಕ್ರಿಯಿಸಿದ್ದು, ಮೊದಲು ನೀವು ಯಾವ ದೇಶದಲ್ಲಿದ್ದೀರೆಂದು ನೆನಪಿನಲ್ಲಿರಲಿ. ಇಲ್ಲೇ ಇದ್ದುಕೊಂಡು ಇದೇ ದೇಶದ ಪ್ರಧಾನಿ ಬಗ್ಗೆ ಗೌರವಿಸಲು ಕಲಿಯಿರಿ. ನಿಮ್ಮ ಪಕ್ಷದವರು ಅಧಿಕಾರದಲ್ಲಿದ್ದಾಗ ಇಂತಹ ದಾಳಿಗಳಾದರೆ ನಿಮ್ಮ ನಾಯಕರ ಬಾಯಿಯಿಂದ ಎಂತಹಾ ಮಾತುಗಳು ಬರುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕೆಲವರು ರಮ್ಯಾಗೆ ಲೇವಡಿ ಮಾಡಿದ್ದಾರೆ.

ಇನ್ನು ಕೆಲವರು ಮಂಡ್ಯದವರೇ ಆಗಿದ್ದುಕೊಂಡು ಅಲ್ಲಿನ ಯೋಧ ಗುರು ಹುತಾತ್ಮನಾದಾಗ ಸಣ್ಣ ಸಂತಾಪವೂ ವ್ಯಕ್ತಪಡಿಸದ ರಮ್ಯಾ ಈಗ ಏಕೆ ವಿಂಗ್ ಕಮಾಂಡರ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ತಪರಾಕಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ
Show comments