Publish Date: Fri, 13 May 2022 (15:37 IST)
Updated Date: Fri, 13 May 2022 (15:39 IST)
ನಟಿ ರಮ್ಯಾ v/s ಡಿಕೆಶಿ ಟ್ವೀಟ್ ವಾರ್ಗೆ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದು, ಕೆಲ ನಾಯಕರು ರಮ್ಯಾ ವಿರುದ್ಧ ಗರಂ ಆಗಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನಟಿ ರಮ್ಯಾ ಅಶಿಸ್ತು, ಉದ್ದಟತನ ತೋರಿದ್ದಾರೆ. ಪಕ್ಷದ ಅಧ್ಯಕ್ಷರ ವಿರುದ್ದ ಬಹಿರಂಗವಾಗಿ ಟ್ವಿಟ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ನಟಿ ರಮ್ಯಾರವರನ್ನ ಕರೆದು ವಿವರಣೆ ಕೇಳ್ತೀವಿ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳುತ್ತೇವೆ. ಮಹಮದ್ ನಲಪಾಡ್ ಆಗಲಿ, ನಾನಾಗಲಿ ಯಾರೆ ಪಕ್ಷದ ವಿರುದ್ದ ನಡೆದರೆ ಅದು ಅಶಿಸ್ತು ಎಂದು ಧೃವನಾರಾಯಣ್ ತಿಳಿಸಿದ್ರು.
geetha
Publish Date: Fri, 13 May 2022 (15:37 IST)
Updated Date: Fri, 13 May 2022 (15:39 IST)