Select Your Language

Notifications

webdunia
webdunia
webdunia
webdunia

ಸಂತೆಯಲ್ಲಿ 126 ಕುರಿ ಖರೀದಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಸಂತೆಯಲ್ಲಿ 126 ಕುರಿ ಖರೀದಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕೋಲಾರ , ಬುಧವಾರ, 18 ಡಿಸೆಂಬರ್ 2019 (12:55 IST)
ಕೋಲಾರ : ಮೈತ್ರಿ ಸರ್ಕಾರದ ಪತನದ  ಬಳಿಕ ಕಾಂಗ್ರೆಸ್ ಶಾಸಕರೆಲ್ಲರೂ ಅಧಿಕಾರ ಕಳೆದುಕೊಂಡು ಆಡಳಿತ ಪಕ್ಷವನ್ನು ಟೀಕಿಸುವುದರಲ್ಲಿ ನಿರತರಾಗಿದ್ದರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾತ್ರ ರಾಜಕೀಯದಿಂದ ಕೊಂಚ ದೂರ ಉಳಿದಿದ್ದಾರೆ.



ಹೌದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇತ್ತೀಚೆಗೆ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವಾರ ಆಂಧ್ರ ಪ್ರದೇಶದ ಚಿತ್ತೂರಿನ ಅಂಗಾಲದಲ್ಲಿ ಕುರಿ ಖರೀದಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು.


ಇದೀಗ ಕೋಲಾರ ತಾಲೂಕಿನ ರೋಜರನಹಳ್ಳಿ ಸಂತೆಯಲ್ಲಿ ಮತ್ತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬರೋಬರಿ 126 ಕುರಿ ಖರೀದಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ನಲ್ಲಿ ನಿರ್ಮಿಸಿರುವ ಶೆಡ್ ನಲ್ಲಿ ಕುರಿಗಳ ಸಾಕಣೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ