Publish Date: Sat, 23 Feb 2019 (17:18 IST)
Updated Date: Sat, 23 Feb 2019 (17:20 IST)
ಲೋಕಸಭಾ ಚುನಾವಣೆಯಲ್ಲಿ ಯಾರೇ ನಿಂತರೂ ಗೆಲುವು ಸಾಧಿಸ್ತಾರೆ. ರಮೇಶ ಜಿಗಜಿಣಗಿ ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ B.S. ಯಡಿಯೂರಪ್ಪ ಹೇಳಿಕೆ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಯಾರೇ ನಿಂತರೂ ಗೆಲುವು ಸಾಧಿಸ್ತಾರೆ. ವಿಜಯಪುರದಲ್ಲಿ ಮುಂದೆ ಕೂಡ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ಕೊಡ್ತಾರೆ. ರಮೇಶ ಜಿಗಜಿಣಗಿನೇ ಮತ್ತೆ ಗೆಲ್ಲುತ್ತಾರೆ ಎಂದರು. ರಮೇಶ ಜಿಗಜಿಣಗಿ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದರು.
ಇನ್ನು ಸಿಎಂ ನಾವು ಬೆಗ್ಗರ್ಸ್ ಅಲ್ಲ ಎಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಿ ಆರ್ ನಾಟ್ ಬೆಗ್ಗರ್ಸ್ ಅಂತಿದ್ದಾರೆ.
ಜೆಡಿಎಸ್ ಕಾಂಗ್ರೆಸ್ ಬಡಿದಾಟ ಕಚ್ಚಾಟ ಶುರುವಾಗಿದೆ. ಸಮ್ಮಿಶ್ರ ಸರ್ಕಾರದ ಪಕ್ಷಗಳ ಹೊಂದಾಣಿಕೆ ಯಶಸ್ಸಾಗುವುದಿಲ್ಲ ಎಂದರು. ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.