Publish Date: Tue, 06 Sep 2022 (19:46 IST)
Updated Date: Tue, 06 Sep 2022 (19:53 IST)
ಬಿಜೆಪಿ ಸರ್ಕಾರ ಹಿಂದೆ ಐದು ವರ್ಷ, ಈಗ ಮೂರು ವರ್ಷ, ಒಟ್ಟು ಎಂಟು ವರ್ಷದಲ್ಲಿ ಇಷ್ಟು ಅದ್ವಾನ ಮಾಡಿದ್ದಾರೆ ಎಂದು ಮಾಡಿದ್ದಾರೆ ಎಂದು ರಾಮಲಿಂಗ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲವೂ ಮಾರಿ ಹೋಗ್ತಾರೆ.ಸೇವಾವಲಯಗಳನ್ನು ಮಾರಾಟ ಮಾಡುತ್ತಿದ್ದಾರೆ.ಅಭಿವೃದ್ಧಿ ಮಾಡಲು 15 ಜನರನ್ನು ಗೆಲ್ಲಿಸಿದ್ದಾರೆ.ಒಬ್ಬ ಮಂತ್ರಿ ಕಂಡರೇ ಇನ್ನೊಬ್ಬ ಮಂತ್ರಿಗೆ ಆಗಲ್ಲ.ಸಿಎಂ ಫ್ಲೈಯಿಂಗ್ ವಿಜಿಟ್ ಕೊಡ್ತಾರೆ.ಬೆಂಗಳೂರಿನಲ್ಲಿ ಫ್ಲೈಯಿಂಗ್ ವಿಜಿಟ್ ಕೊಟ್ಟರೆ ಆಗಿ ಬಿಡುತ್ತಾ?ಹಿಂದೆ ನಾನು ಮೂರು ಸಾರಿ ವಿಜಿಟ್ ಮಾಡುತ್ತಿದ್ದೆ, ಸಿದ್ದರಾಮಯ್ಯ ತಿಂಗಳಿಗೆ ಒಂದು ಸಾರಿಯಾದರೂ ವಿಜಿಟ್ ಮಾಡುತ್ತಿದ್ದರು.ಆದ್ರೆ ಈಗ ಮಳೆ ವಿಚಾರ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನಿದ್ದೆ ಜಾರಿದಾರೆ.
ನಾವು ಕೆಲಸ ಮಾಡಿಯೇ ಮತ ತೊಗೊಬೇಕು.ಬಿಜೆಪಿಯವರು ಹಿಂದು- ಮುಸ್ಲಿಂರ ನಡುವೆ ಜಗಳ ತಂದು ಇಡ್ತಾರೆ.ಮೋದಿ ಮತ ಹಾಕಿಸುತ್ತಾರೆ ಎಂದು ಹೇಳ್ತಾರೆ.ಮತ ಹಾಕಿಸಿಕೊಳ್ಳಲು ಬೇರೆ ಬೇರೆ ದಾರಿಗಳಿವೆ ಅವರಿಗೆ ಆದ್ದರಿಂದ ಬಿಜೆಪಿಯವರು ಕೆಲಸ ಮಾಡಲ್ಲ ಎಂದು ರಾಮಲಿಂಗ ರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದಾರೆ.
geetha
Publish Date: Tue, 06 Sep 2022 (19:46 IST)
Updated Date: Tue, 06 Sep 2022 (19:53 IST)