ಸಿಲಿಕಾನ್ ಸಿಟಿ ಭಾಗದಲ್ಲಿ ರಸ್ತೆಗಳು ಜಲಾವೃತವಾಗಿದೆ. ಪ್ರವಾಹಕ್ಕೆ ಒಳಗಾದ ಪ್ರದೇಶದಲ್ಲಿ ಸಿಲುಕಿದ ಜನರನ್ನು ಸ್ಥಳಾಂತರ ಮಾಡಲು ಟ್ರಾಕ್ಟರ್ ಅನ್ನು ಬಳಕೆ ಮಾಡಲಾಗುತ್ತಿದೆ. ಟ್ರಾಕ್ಟರ್ ಮೂಲಕ ಜನರ ಸ್ಥಳಾಂತರ ಕಾರ್ಯ ಮಾಡಲಾಗುತ್ತಿದೆ.
ನೀರು ತುಂಬಿರುವ ಕಾರಣದಿಂದಾಗಿ ಹಲವಾರು ಐಟಿ ಉದ್ಯೋಗಿಗಳು ಟ್ರ್ಯಾಕ್ಟರ್‌ಗಳನ್ನು ಬಳಸಿ ಕೆಲಸಕ್ಕೆ ತೆರಳಿದ್ದಾರೆ. ಸೆಪ್ಟೆಂಬರ್ 5 ರಂದು, ಐಟಿ ಉದ್ಯೋಗಿಗಳು ಹೆಚ್ಚಾಗಿ ಟ್ರ್ಯಾಕ್ಟರ್ ಮೂಲಕ ಪ್ರಯಾಣಿಸಿದ್ದಾರೆ.
"ನಾವು ನಮ್ಮ ಕಚೇರಿಗೆ ಅಥವಾ ಉದ್ಯೋಗಕ್ಕೆ ಹಲವಾರು ದಿನಗಳ ಕಾಲ ರಜೆಯನ್ನು ಹಾಕಲು ಸಾಧ್ಯವಿಲ್ಲ. ನಾವು ತುಂಬಾ ದಿನಗಳ ಕಾಲ ರಜೆ ಮಾಡುವುದು ನಮ್ಮ ಕೆಲಸದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ನಾವು ಅದಕ್ಕಾಗಿ 50 ರೂಪಾಯಿ ಪಡೆದು ನಮ್ಮನ್ನು ಆಫೀಸ್‌ಗೆ ಕರೆದೊಯ್ಯುವ ಟ್ರ್ಯಾಕ್ಟರ್‌ಗಳನ್ನು ಕಾಯುತ್ತಿದ್ದೇವೆ," ಎಂದು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ಟ್ವೀಟ್; ಈ ನಡುವೆ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ತಮ್ಮ ಕುಟುಂಬವನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ತಮ್ಮ ನಿವಾಸ ಇರುವ ಪ್ರದೇಶವು ನೀರಿನಲ್ಲಿ ಮುಳುಗಿರುವ ಕಾರಣದಿಂದಾಗಿ ಗೌರವ್ ಮುಂಜಾಲ್‌ರ ಕುಟುಂಬ ಮತ್ತು ಸಾಕುಪ್ರಾಣಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.