Select Your Language

Notifications

webdunia
webdunia
webdunia
webdunia

ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ : ಭಗವಾನ್

ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ : ಭಗವಾನ್
ಮಂಡ್ಯ , ಶುಕ್ರವಾರ, 20 ಜನವರಿ 2023 (13:35 IST)
ಮಂಡ್ಯ : ಚಿಂತಕ ಪ್ರೊ. ಕೆ.ಎಸ್.ಭಗವಾನ್ ಇದೀಗ ಮತ್ತೆ ಆದರ್ಶ ಪುರುಷ ರಾಮನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮ ರಾಜ್ಯ ಎಂದು ದೇಶದಲ್ಲಿ ಕಥೆ ಕಟ್ಟಿದ್ದಾರೆ. ರಾಮ ರಾಜ್ಯ ಮಾತು ಹರಡಲು ಮಹಾತ್ಮ ಗಾಂಧೀಜಿ ಅವರೇ ಕಾರಣ. ವಾಲ್ಮೀಕಿ ರಾಮಾಯಣ ಓದಿ ಉತ್ತರ ಕಾಂಡದಲ್ಲಿ ಓದಿದ್ರೆ ರಾಮ ರಾಜ್ಯಕ್ಕೆ ಅರ್ಥ ಇಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಜ್ಯ ರಾಜ್ಯಭಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಪುರೋಹಿತರ ಜೊತೆ ಕೂತು ಆ ಕಥೆ ಈ ಕಥೆ ಎಂದು ರಾಮ ಹರಟೆ ಹೊಡೆಯುತ್ತಿದ್ದ. ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ. ಸೀತೆಗೂ ರಾಮ ಹೆಂಡ ಕುಡಿಸುತ್ತಿದ್ದ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇವೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತವು 2023ಕ್ಕೆ ಅತಿ ಹೆಚ್ಚು ಜನಸಂಖ್ಯೆ