Select Your Language

Notifications

webdunia
webdunia
webdunia
webdunia

ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ವಿನೂತನ ಪ್ರತಿಭಟನೆ

ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ವಿನೂತನ ಪ್ರತಿಭಟನೆ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿದ್ರು. ಕರ್ನಾಟಕ ಹಾಲು ಮಹಾಮಂಡಳದ ಉತ್ಪನ್ನ ನಂದಿನಿಯನ್ನು ಗುಜರಾತ್ ನ ಅಮೂಲ್ ಜೊತೆಗೆ ವಿಲೀನ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸರಿಯಿಲ್ಲ ಎಂದು ನಂದಿನಿ ಉತ್ಪನ್ನಗಳ ಹಿಡಿದು ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಿದ್ರು.ದೇಶದಲ್ಲೇ ಕೆ.ಎಮ್.ಎಫ್ ತುಂಬಾ ಹೆಸರು ಮಾಡಿದ್ದು, ಯಾವುದೇ ಕಾರಣಕ್ಕೂ ಕೆ.ಎಮ್.ಎಫ್ ನ ಅಮೂಲ್ ವಿಲೀನ ಮಾಡುವ ಪ್ರಶ್ನೆ ಇಲ್ಲ ಎಂದು ತಲೆಯ ಮೇಲೆ ಹಾಲಿನ ಪ್ಯಾಕೇಟ್ ಹಿಡಿದು ಅಮಿತ್ ಶಾ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಸ್ಥಳದಲ್ಲೇ ಹಾಲಿನ ಪಾಯಸ ಮಾಡಿ ವಿನೂತನ ಪ್ರೊಟೆಸ್ಟ್ ಮಾಡಲಾಗಿದ್ದು, ಅಮಿತ್ ಷಾ ಹೇಳಿಕೆ ವಿರುದ್ದ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್ ಭಾಷಾ ಲ್ಯಾಬ್ ಉದ್ಘಾಟನೆ