Publish Date: Wed, 31 Oct 2018 (15:49 IST)
Updated Date: Wed, 31 Oct 2018 (15:51 IST)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸುಗ್ರಿವಾಜ್ಱಎ ಹೊರಡಿಸಬೇಕು ಎಂಬ ಆಗ್ರಹ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅತಾವಳೆ ಅಪಸ್ವರ ಎತ್ತಿದ್ದಾರೆ.
ಹಿಂದು-ಮುಸ್ಲಿಂ ಯಾವುದೇ ಕಾರಣಕ್ಕೂ ನಡುವಿನ ಐಕ್ಯತೆಗೆ ಧಕ್ಕೆ ಉಂಟಾಗಬಾರದು. ಒಂದು ವೇಳೆ ರಾಮಮಂದಿರ ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡರೆ, ಅದೇ ರೀತಿಯಲ್ಲಿ ಮಸೀದಿ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಸ್ವಾಮಿ ಚಕ್ರಪಾಣಿ, ವಿಶ್ವ ಹಿಂದೂ ಪರಿಷತ್ ನಿಯೋಗವೊಂದು ಈಚೆಗೆ ರಾಮಮಂದಿರ ನಿರ್ಮಿಸಲು ಸುಗ್ರಿವಾಜ್ಱಎ ಹೊರಡಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹ ಮಾಡಿತ್ತು.