Publish Date: Mon, 23 Apr 2018 (18:44 IST)
Updated Date: Mon, 23 Apr 2018 (18:45 IST)
ಪ್ರಖ್ಯಾತ ಉಡುಪಿ ಶ್ರೀ ಕೃಷ್ಣಮಠಕ್ಕೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.
ಶ್ರೀಮಠಕ್ಕೆ ಭೇಟಿ ನೀಡಿದ ಅವರು, ಕಡೆಗೋಲು ಕೃಷ್ಣನ ದರ್ಶನ ಮಾಡಿ ಮುಖ್ಯಪ್ರಾಣ ದೇವರಿಗೆ ಮೊರೆ ಹೋದರು. ಇದೇ ವೇಳೆ ಪರ್ಯಾಯ ಪಲಿಮಾರುಶ್ರೀಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆದುಕೊಂಡರು.
ಅಲ್ಲದೇ ಚರ್ಚೆ ನಡೆಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸ್ವಾಮೀಜಿಗಳು ಗೌರವ ಸಲ್ಲಿಕೆ ಮಾಡಿದರು. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.