Publish Date: Mon, 23 Apr 2018 (13:07 IST)
Updated Date: Mon, 23 Apr 2018 (13:09 IST)
ಚುನಾವಣಾ ಪ್ರಚಾರಕ್ಕೆ ಗದಗ ಜಿಲ್ಲೆಗೆ ಸಂಸದ ಬಿ. ಶ್ರೀ ರಾಮುಲು ಭೇಟಿ ನೀಡಿದ್ದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಅಭ್ಯರ್ಥಿಗಳು ಗೆಲ್ಲಲು ಎಷ್ಟು ಬಾರಿ ಬೇಕಾದ್ರೂ ಜಿಲ್ಲೆಗೆ ಭೇಟಿ ನೀಡಿ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೀನಿ. ಬಾದಾಮಿಯಿಂದ ಸ್ಪರ್ಧಿಸುವ ವಿಚಾರ ಕುರಿತು ಹೇಳಿಕೆ ನೀಡಿ, ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರಿಂದ ಇದುವರೆಗೂ ಯಾವುದೇ ಸೂಚನೆ ಬಂದಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾನು ಸದಾ ಬದ್ಧ ಎಂದು ಸ್ಪಷ್ಟಪಡಿಸಿದರು.
ಜನಾರ್ಧನ ರೆಡ್ಡಿ ಪಕ್ಷದ ಸಾಮಾನ್ಯ ಕಾರ್ಯಕರ್ತ, ಅವರು ನನಗಾಗಿ ಪಕ್ಷಕ್ಕಾಗಿ ದುಡಿಯುತ್ತಾರೆ.ಅಮಿತ್ ಶಾ ನಮ್ಮ ಹಿರಿಯ ಸಹೋದರರಿದ್ದಂತೆ, ಅವರು ಏನು ಹೇಳ್ತಾರೋ ಅದೇ ಫೈನಲ್ ಎಂದು ಗದಗನ ಹೆಲಿಪ್ಯಾಡ್ ನಲ್ಲಿ ಬಿ. ಶ್ರೀರಾಮುಲು ತಿಳಿಸಿದ್ದಾರೆ.