ಪರಂ ಆಪ್ತನ ವಿರುದ್ದ ಗರಂ ಆದ ರಾಜಣ್ಣ!

geetha
ಭಾನುವಾರ, 25 ಫೆಬ್ರವರಿ 2024 (14:35 IST)
ತುಮಕೂರು :ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಲು ಮುರಳಿಧರ ಹಾಲಪ್ಪ ವಿರೋಧ ವ್ಯಕ್ತಪಡಿಸುತ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್‌.ರಾಜಣ್ಣ, ಯಾವ ಸಿಕ್ಕಾಪಟ್ಟೆ ರೇಸ್ ನಡೀರೀ, ಯಾರ್ರೀ ಅವನು ಮುರಳೀಧರ ಹಾಲಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಅವನನ್ನು ನೀವೇ ರೇಸ್ ಗೆ ತಗೊಂಡೋಗಿ ಮುಂದೆ ಕೂರಿಸಿದ್ದೀರಿ ಅಷ್ಟೇ.   ಯಾರಿಗೆ ವೋಟ್ ಹಾಕ್ಸಿದ್ದಾನ್ರೀ ಅವನು, ನನ್ನ ಕ್ಷೇತ್ರ ಮಧುಗಿರಿಯಲ್ಲಿ ನಾನು ಐದು ಚುನಾವಣೆ ನಡೆಸಿದ್ದೀನಿ. ಒಂದು ಚುನಾವಣೆಯಲ್ಲಿ ಒಂದು ವೋಟ್ ಹಾಕ್ಸಿದ್ದಾನಾ ಕೇಳ್ರಿ ಎಂದು ಪ್ರಹಾರ ನಡೆಸಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್‌ ಗಾಗಿ ಕಾಂಗ್ರೆಸ್‌ ನಾಯಕರ ನಡುವೆ ಬಹಿರಂಗ ಕದನ ಪ್ರಾರಂಭಗೊಂಡಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಮುದ್ದಹನುಮೇಗೌಡರಿಗೆ ಟಿಕೆಟ್‌ ಖಚಿತ ಎಂದಿರುವ ಸಚಿವ ಕೆ.ಎನ್‌. ರಾಜಣ್ಣ,  ಗೃಹಸಚಿವ ಜಿ. ಪರಮೇಶ್ವರ್‌ ಅವರ ಆಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ವಿರುದ್ದ ಕಿಡಿಕಾರಿದ್ದಾರೆ. 

ಜೊತೆಗೆ, ಬಿಜೆಪಿಯಿಂದ ಸೋಮಣ್ಣ ಟಿಕೆಟ್ ಸಿಗಬಹುದು ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, ಆಕಾಶ ನೋಡೋದಕ್ಕೆ ನೂಕು ನುಗ್ಗಲಾ, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಸೋಮಣ್ಣ ಅವರು ಸ್ಪರ್ಧೆ ಮಾಡಲಿ, ಸೋಮಣ್ಣ ನಮ್ಮ ಸ್ನೇಹಿತರು. ಆದರೆ ರಾಜಕಾರಣವೇ ಬೇರೆ, ವಿಶ್ವಾಸವೇ ಬೇರೆ ಎಂದಿದ್ದು, ಮಾ. 10 ರೊಳಗೆ ಟಿಕೆಟ್‌ ಖಚಿತವಾಗಲಿದೆ ಎಂದಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನಲ್ಲೇ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು: ಆರ್ ಅಶೋಕ್ ಶಾಕಿಂಗ್ ಮಾಹಿತಿ

ಕುರ್ಚಿ ಫೈಟ್ ನಿವಾರಣೆಗೆ ಹೈಕಮಾಂಡ್ ಅಖಾಡಕ್ಕೆ: ಈಗೆಲ್ಲಿದ್ದಾರೆ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಲು ಕೈ ಹೈಕಮಾಂಡ್ ಗೆ ಕಾಡುತ್ತಿರುವ ಭಯ ಯಾವುದು ಗೊತ್ತಾ

ಎಲ್ಲಾ ಹೈಕಮಾಂಡ್ ನಿರ್ಧರಿಸುತ್ತದೆ ಎಂದ ಮಲ್ಲಿಕಾರ್ಜುನ ಖರ್ಗೆ: ಹಾಗಿದ್ರೆ ನೀವ್ಯಾರು ಎಂದು ಪ್ರಶ್ನಿಸಿದ ಪಬ್ಲಿಕ್

Karnataka Weather: ರಾಜ್ಯದಲ್ಲಿ ಈ ವಾರವೂ ಮಳೆಯಿರುತ್ತಾ ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments