Publish Date: Fri, 17 Jan 2020 (15:17 IST)
Updated Date: Fri, 17 Jan 2020 (17:59 IST)
ಬಿಜೆಪಿ ನೂತನ ಶಾಸಕರೊಬ್ಬರ ಜೊತೆ ರಾಜಾಹುಲಿ ಕೈಕೈ ಮಿಲಾಯಿಸೋಕೆ ಮುಂದಾಗಿದ್ದ ಘಟನೆ ನಡೆದಿದೆ ಎನ್ನಲಾಗಿದೆ.
ಮಂಡ್ಯದ ಗವಿರಂಗನಾಥಸ್ವಾಮಿ ಕ್ಷೇತ್ರದಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ನನಗೇ ಮೊದಲ ಪೂಜೆ ನೀಡಬೇಕು. ಹೀಗಂತ ಶಾಸಕ ನಾರಾಯಣಗೌಡ ಹಾಗೂ ತಹಶೀಲ್ದಾರ್ ಎಂ. ಶಿವಮೂರ್ತಿ ಅವರ ವಿರುದ್ಧ ವಾಗ್ಯುದ್ಧ ನಡೆಸಿದ್ದಾರೆ ತಾಲ್ಲೂಕು ಪಂಚಾಯತಿ ಸದಸ್ಯ ರಾಜಾಹುಲಿ ದಿನೇಶ್.
ಈ ಸಂದರ್ಭದಲ್ಲಿ ರಾಜಾಹುಲಿ ಬೆಂಬಲಿಗರು ಹಾಗೂ ಶಾಸಕ ನಾರಾಯಣಗೌಡರ ಬೆಂಬಲಿಗರ ನಡುವೆ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳು ನಡೆದಿವೆ.
ತಕ್ಷಣವೇ ಮಧ್ಯ ಪ್ರವೇಶಿಸಿದ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಗಲಾಟೆಯನ್ನು ನಿಯಂತ್ರಿಸಿದ್ದಾರೆ. ಕೈಕೈ ಮಿಲಾಯಿಸುವ ಹಂತ ತಲುಪಿದ್ದ ಯುವಕರ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಶಾಸಕ ನಾರಾಯಣಗೌಡರಿಗೆ ಮೊದಲ ಪೂಜೆಯನ್ನು ಕೊಡಬಾರದು. ಕ್ಷೇತ್ರದ ತಾಲ್ಲೂಕು ಪಂಚಾಯತಿ ಸದಸ್ಯನಾದ ನನಗೆ ಮೊದಲ ಪೂಜೆ ನೀಡಬೇಕು. ಹೀಗಂತ ಆಗ್ರಹಿಸಿ ಗದ್ದಲ ನಡೆಸಿ ಗಲಾಟೆಗೆ ಮುಂದಾದ ರಾಜಾಹುಲಿ ದಿನೇಶ್ ಮತ್ತು ಅವರ ಬೆಂಬಲಿಗರನ್ನು ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ದೇವಾಲಯದ ಆವರಣದಿಂದ ಹೊರಗೆ ಕಳಿಸಿದ್ದಾರೆ.