Publish Date: Sat, 06 Oct 2018 (17:49 IST)
Updated Date: Sat, 06 Oct 2018 (17:51 IST)
ಭೀಕರ ಮಳೆಗೆ ನಲುಗಿದ್ದ ಕೊಡಗಿನಲ್ಲಿ ಮತ್ತೆ ಮಳೆ ಅವತರಿಸಿದೆ.
ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈ ಹಿಂದೆ ನಿರಂತರವಾಗಿ ಸುರಿದ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ಹಾನಿಗೆ ಮಳೆ ಕಾರಣವಾಗಿತ್ತು.
ಈಗಲೂ ಗುಡುಗು, ಮಿಂಚಿನೊಂದಿಗೆ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ಜೋರಾಗಿಯೇ ಮಳೆ ಸುರಿಯುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.
ವಿರಾಜಪೇಟೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಕೆಲಕಾಲ ಅಸ್ತವ್ಯವಸ್ತವಾಗಿತ್ತು. ಈ ಹಿಂದಿನ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಗ್ರಾಮಗಳು ಈಗ ಸಹಜ ಸ್ಥಿತಿಯತ್ತ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿರುವ ಮಳೆ ಜನರನ್ನು ಚಿಂತೆಗೀಡು ಮಾಡಿದೆ.