Publish Date: Sat, 06 Oct 2018 (17:26 IST)
Updated Date: Sat, 06 Oct 2018 (17:28 IST)
ಎಟಿಎಂ ನಲ್ಲಿ ಹರಿದ ನೋಟು ಗ್ರಾಹಕರು ಲಭ್ಯವಾಗಿದ್ದು, ಗ್ರಾಹಕರನ್ನು ಕಂಗಾಲಾಗುವಂತೆ ಮಾಡಿದೆ.
ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಾಳಾದ ನೋಟು ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿನ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ, ಹಾಳಾದ ನೋಟುಗಳು ಗ್ರಾಹಕರಿಗೆ ಲಭ್ಯವಾಗಿವೆ.
ಗ್ರಾಹಕರು ಡ್ರಾ ಮಾಡಿದ ಬಹುತೇಕ ನೋಟುಗಳು ಹಾಳಾದ ನೋಟುಗಳಾಗಿರುವುದು ಶಾಕ್ ನೀಡಿದೆ.
ಗ್ರಾಹಕರು ಡ್ರಾ ಮಾಡಿದ ಎರಡು ಸಾವಿರ ಮುಖ ಬೆಲೆಯ ಎಲ್ಲ ನೋಟುಗಳ ಹಾಳಾಗಿದ್ದರೆ, ಇನ್ನು ಕೆಲ ನೊಟುಗಳು ತುಂಡಾಗಿ ಅಂಟಿನ ಪಟ್ಟಿ ಹಚ್ಚಿ ನೋಟುಗಳ ಕೆಲಭಾಗ ತುಂಡಾಗಿವೆ.
ಡ್ರಾ ಮಾಡಿದ ನೋಟುಗಳು ಅಂಗಡಿ, ಬ್ಯಾಂಕಗಳಿಗೆ ಒಯ್ದರೆ ತೆಗೆದುಕೊಳ್ಳುತ್ತಿಲ್ಲ. ವಾಪಸ್ ಕಳಿಸುತ್ತಿರುವ ಅಂಗಡಿಯವರಿಂದ ಗ್ರಾಹಕರು ಮತ್ತಷ್ಟು ಹೈರಾಣಾಗುವಂತಾಗಿದೆ.
ಎಟಿಎಂ ನೋಟು ನಂಬಿ ಗ್ರಾಹಕರು ಕಂಗಾಲಾಗುವಂತಾಗಿದ್ದು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.