Select Your Language

Notifications

webdunia
webdunia
webdunia
webdunia

ಸಿದ್ದರಾಮೋತ್ಸವಕ್ಕೆ ಮಳೆಯ ಕಾಟ..?

Rain forest for Siddaramautsavam
bangalore , ಮಂಗಳವಾರ, 2 ಆಗಸ್ಟ್ 2022 (18:31 IST)
ನಾಳೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನೋತ್ಸವವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.ಇನ್ನೇನು ಸಂಭ್ರಮ ಆಚರಿಸಲು ಒಂದೇ ದಿನ ಬಾಕಿ ಇರುವಾಗ ರಾಜ್ಯಾದ್ಯಂತ ವರುಣ ತನ್ನ ದರ್ಶನ ತೋರಿದ್ದಾನೆ. ಪ್ರತಿ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗ್ತಿದ್ದು, ನಾಳೆ ಬೆಣ್ಣೆನಗರಿಯಲ್ಲಿ ನಡೆಯುವ ಸಂಭ್ರಮಕ್ಕೆ ಮಳೆಯ ಕಾಟ ಹೆಚ್ಚಾಗುವ ಸಾಧ್ಯತೆಗಳಿದೆ..ದಾವಣಗೆರೆಯಲ್ಲಿ ಇನ್ನೂ 10 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ..ಹೀಗಾಗಿ ಸಿದ್ದು ಉತ್ಸವಕ್ಕೆ ಮುಂಜಾಗ್ರತಾ ಕ್ರಮವಾಗಿ ಸಿದ್ದು ಬೆಂಬಲಿಗರು ಮತ್ತು ಅಭಿಮಾನಿಗಳು ಹೆಚ್ಚು ನಿಗಾ ವಹಿಸಿದ್ದಾರೆ..ಅಲ್ಲದೇ, ಸಿದ್ದರಾಮೋತ್ಸವವನ್ನು ಜಾತ್ರೆ ರೀತಿ ಆಚರಿಸಲಾಗ್ತಿದ್ದು, ಈಗಾಗಲೇ ಅಡುಗೆ ಸಿದ್ಧತೆ ಕೂಡ ರೆಡಿಯಾಗಿದೆ..ನಾಳೆ  ನಡೆಯಲಿರುವ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಯಾಗ್ತಾನೋ, ಇಲ್ವೋ ಅಂತ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು‌ ನಾಡಿನಾದ್ಯಂತ ನಾಗಪಂಚಮಿ ಹಬ್ಬದ ಸಂಭ್ರಮ..!