Publish Date: Fri, 16 Jul 2021 (17:19 IST)
Updated Date: Fri, 16 Jul 2021 (17:25 IST)
ಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು
ನಗರದ ಕುಲಶೇಖರ ರೈಲ್ವೆ ಟನಲ್ ಬಳಿ ರೈಲು ಹಳಿಗಳ ಮೇಲೆ ಭಾರೀ ಭೂ ಕುಸಿತ ಉಂಟಾಗಿದ್ದು, ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಂಗಳೂರು ಜಂಕ್ಷನ್ ಹಾಗೂ ತೋಕೂರು ರೈಲ್ವೆ ಮಾರ್ಗ ನಡುವೆ ಕುಲಶೇಖರ ರೈಲ್ವೆ ಟನಲ್ ಬಳಿ ಭಾರೀ ಭೂ ಕುಸಿತ ಉಂಟಾಗಿದೆ. ಈ ಹಿನ್ನಲೆಯಲ್ಲಿ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ. ರೈಲ್ವೆ ಹಳಿಗಳ ಮೇಲಿನಿಂದ ಮಣ್ಣು ತೆರವುಗೊಳಿಸಿ ದುರಸ್ತಿ ಕಾರ್ಯ ನಡೆಯುವವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಜುಲೈ19ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.