Select Your Language

Notifications

webdunia
webdunia
webdunia
webdunia

ಐತಿಹಾಸಿಕ ನಗರಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಏತನಿರಾವರಿ ಯೋಜನೆ

ಐತಿಹಾಸಿಕ ನಗರಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಏತನಿರಾವರಿ ಯೋಜನೆ
bangalore , ಶುಕ್ರವಾರ, 16 ಜುಲೈ 2021 (17:12 IST)
ಬೆಂಗಳೂರು : ಅದು ಐತಿಹಾಸಿಕ ನಗರಿಯ ಬೃಹತ್ ಜಲಾಶಯ  ಆ ಜಲಾಶಯ ನಿರ್ಮಾಣಕ್ಕಾಗಿಯೆ ಗ್ರಾಮಸ್ಥರು ಮನೆ ಮಠ ಎಲ್ಲವನ್ನ ಕಳೆದುಕೊಂಡ್ರು,  ಆಗಿನ ಮದ್ರಾಸ್ ಸರ್ಕಾರ ಮುಳಗಡೆಗೊಂಡ ಪ್ರದೇಶಗಳ ಅನುಕೂಲಕ್ಕಾಗಿ ಏತನಿರಾವರಿ ಯೋಜನೆಯನ್ನ ಅನಷ್ಟಾನಕ್ಕೆ ತಂದ್ರೂ ಆದ್ರೆ ಪ್ರಸ್ತುತ ಆ ಯೋಜನೆ  ಈಗ ಹಳ್ಳಹಿಡಿದಿದೆ. ಹೌದು ಇಲ್ಲಿ ಕಾಣ್ತಾ ಇರೋ ಹೂಳು ತುಂಬಿರೊ ಕಾಲುವೆ ,ಅಲ್ಲಾಲ್ಲಿ ತುಕ್ಕು ಹಿಡಿದಿರೋ ಯಂತ್ರೋಪಕರಣಗಳು , ಇದನ್ನೆಲ್ಲ ನೋಡ್ತಾ ಇದ್ರೆ ಇದ್ಯಾವದೋ ಕಳಪೆ ಕಾಮಗಾರಿ ಯೋಜನೆ ಅಂತ ಥಟ್ಟನೆ ನೆನೆಪಿಸಿಕೊಳ್ಳಬಹುದು ಅದ್ರೆ ಇದು ಅದಲ್ಲ, ರಾಜ್ಯದ  ಪ್ರತಿಷ್ಟಿತ ಜಲಾಶಯಗಳಲ್ಲೊಂದಾದ ತುಂಗಾಭದ್ರ ಜಲಾಶಯ, ಈ ಜಲಾಶಯ  ನಿರ್ಮಾಣ ಮಾಡೋ ಸಮಯದಲ್ಲಿ ಅನೇಕ ಗ್ರಾಮಗಳು ಮುಳುಗಡೆಯಾಗ್ತಾವೆ, ಅಂತಹ ಸಂರ್ಧಭದಲ್ಲಿ ಆಗಿನ ಮೈಸೂರ ರಾಜ್ಯದ ಸರ್ಕಾರ ಉತ್ತರ ಕರ್ನಾಟಕದ ರೈತರ ಕಲ್ಯಾಣಕ್ಕಾಗಿ ಬಹು ನಿರೀಕ್ಷಿತ ಏತ ನಿರವಾರಿ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗುತ್ತದೆ ಆಗಿನ ಗ್ರಾಮೀಣಾ ಅಭಿವೃದ್ದಿ ಸಚಿವರಾಗಿದ್ದ ಎಂ.ವೈ ಘೋರ್ಪಡೆಯವರು ಏತನಿರಾವರಿ ಯೋಜನೆಗೆ ಚಾಲನೆಯನ್ನ ಕೊಡ್ತಾರೆ, ಇಂತಹ ಸಂರ್ಧಭದಲ್ಲಿ ಕಾಲುವೆಗಳ ನಿರ್ಮಾಣ ಕೂಡ ನಿರ್ಮಾಣ ಮಾಡಲಾಗುತ್ತದೆ, ಪ್ರತಿ ವರ್ಷವೂ ಕೂಡ ಜಲಾಶಯದಿಂದ ಹರಿದು ಬರುವ ನೀರಿನಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಂಡಿರುತ್ತದೆ ಅದನ್ನ ನಿರ್ವಹಣೆ ಮಾಡಲೆಂದು ಟಿ.ಬಿ ಬೋರ್ಡ್ ಅಧಿಕಾರಿಗಳು ಲಕ್ಷಾಂತಾರ ರೂಪಾಯಿಗಳನ್ನ ಖರ್ಚು ಮಾಡಲಾಗುತ್ತದೆ ಅದ್ರೆ ಬರು ಬರುತ್ತಾ  ಅಧಿಕಾರಿಗಳ ದಿವ್ಯ ನಿರ್ಲಕ್ಚ್ಯಕ್ಕೆ ಕಾಲುವೆಗಳು ಬೃಹತ್ ಪ್ರಮಾಣದ ಹೂಳೆ ಕಾಲುವೆಗಳ ದುಸ್ಥಿತಿಗೆ ಕಾರಣವಾಗುತ್ತದೆ.ಇನ್ನು ಈ ಕಾಲುವೆಗಳು ಕಳೆದ ಇಪ್ಪತ್ತು ವರ್ಷದಿಂದಲೂ ನಿರ್ಹವಣೆಯಿಲ್ಲದೆ ಸುಮಾರು 6, ರಿಂದ ಏಳು ಕಿ.ಮಿ ವರೆಗೆ ಕಾಲುವೆಗಳು ಹಾಳಾಗಿದೆ ಅದರಲ್ಲಿ ಹುಲ್ಲು ಕಡ್ಡಿ ಬೆಳೆದು ಅಲ್ಲಲ್ಲಿ ಕಾಲುವೆಗಳು ಒಡೆದು ನೀರು ಪೋಲಾಗುತ್ತಿದೆ , ಸುಮಾರು ನಾಲ್ಕು ಸಾವಿರಾ ಎಕರೆ ವಿಸ್ತೀರ್ಣದ ಕೃಷಿ ಭೂಮಿಗೆ ನೀರುಣಿಸುವ ಬೃಹತ್ ಯೋಜನೆ ಇದಾಗಿತ್ತು ಆದ್ರೆ ಸದ್ಯ ಸರಿಯಾದ ನಿರ್ವಹಣೆ ಕೊರತೆಯಿಂದ  ಈಗ ಕೇವಲ ಒಂದು ಸಾವಿರಾದ ಎರಡುನೂರು ಎಕರೆಗೆ ಮಾತ್ರ ನೀರು ಹರಿಯುತ್ತಿದೆ, ಈ ಬಗ್ಗೆ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ತಧೋರಣೆ ತಾಳುವುದರ ಪರಿಣಾಮ ಹಲವಾರು ರೈತರ ಹೊಲಗಳಿಗೆ ನೀರು ತಲುಪದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ರೈತರಿಗಾಗಿಯೇ ಆಗಿನ ಸರ್ಕಾರ ಇಚ್ಚಾಶಕ್ತಿಯಿಂದ ಜಾರಿಗೆ ತಂದ ಮಹತ್ವಾಕಾಂಕ್ಷಿ ಏತನಿರಾವರಿ ಯೋಜನೆಯನ್ನ  ನಿರ್ವಹಣೆ ಮಾಡಬೇಕಾದ ಟಿ.ಬಿ ಬೋರ್ಡ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಂದು ಅನ್ನಧಾತರು ವ್ಯಥೆಪಡಬೇಕಾತಹ ದುಸ್ಥಿತಿ ಒದಗಿ ಬಂದಿದೆ ಇನ್ನಾದ್ರೂ ಜನಪ್ರತಿನಿಧಿಗಳು ,ಅಧಿಕಾರಿಗಳು ಹೂಳು ತುಂಬಿರೊ ಕಾಲುವೆಗಳನ್ನ ಸರಿಪಡಿಸಿ ರೈತರ ಹೊಲಗಳಿಗೆ ಸರಗಾವಾಗಿ ನೀರು ಹರಿಯುವಂತೆ ಅನುಕೂಲಮಾಡಿಕೊಡಬೇಕಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಆಪ್ತರಿಗೂ ಡಿಕೆಶಿ ಗಾಳ