Select Your Language

Notifications

webdunia
webdunia
webdunia
webdunia

ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ದೇವೇಗೌಡ

ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ದೇವೇಗೌಡ
ಬೆಂಗಳೂರು , ಗುರುವಾರ, 8 ಜೂನ್ 2023 (12:14 IST)
ಬೆಂಗಳೂರು : ಒಡಿಶಾ ತ್ರಿವಳಿ ರೈಲು ದುರಂತ ಸಂಭವಿಸಿದ ಬಳಿಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದ್ದಾರೆ.

ಮಂಗಳವಾರ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ರೈಲು ದುರಂತದಿಂದ ಸಂಭವಿಸಿದ ಬಳಿಕ ಅಲ್ಲಿನ ಪರಿಸ್ಥತಿಯನ್ನು ಸಹಜಸ್ಥಿತಿಗೆ ತರಲು ಅಶ್ವಿನಿ ವೈಷ್ಣವ್ ಅವರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಈ ಹಂತದಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸುವುದು ಸರಿಯಲ್ಲ ಎಂದರು.

 2024ರ ಚುನಾವಣೆಗೆ ವಿರೋಧ ಪಕ್ಷಗಳು ಒಗ್ಗೂಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾವು ಯಾವುದೇ ಚರ್ಚೆಯನ್ನು ಮಾಡಿಲ್ಲ. ಮೊದಲನೆಯದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ನಾವು ಬಯಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ?