Publish Date: Wed, 21 Mar 2018 (13:14 IST)
Updated Date: Wed, 21 Mar 2018 (13:18 IST)
ಮಂಗಳೂರು: ಕರಾವಳಿ ಜಿಲ್ಲೆಯ ಪ್ರವಾಸದ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ಬಳಿಕ ಶೃಂಗೇರಿ ಸ್ವಾಮೀಜಿಗಳ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಶಾರದಾಂಬೆ ದರ್ಶನ ಪಡೆದು ಬಳಿಕ ತುಂಗಾ ನದಿಯಲ್ಲಿ ಮೀನುಗಳಿಗೆ ಆಹಾರ ನೀಡಿದ ರಾಹುಲ್ ಗಾಂಧಿ ನೇರವಾಗಿ ದೇವಾಲಯದಿಂದ ಸ್ವಾಮೀಜಿಗಳ ನಿವಾಸದವರೆಗೆ ನಡೆದುಕೊಂಡೇ ಸಾಗಿದರು.
ದೇವಾಲಯ ದರ್ಶನ ವೇಳೆ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಮುಂತಾದ ನಾಯಕರೂ ರಾಹುಲ್ ಗಾಂಧಿಗೆ ಜತೆಯಾಗಿದ್ದರು. ಆದರೆ ಸ್ವಾಮೀಜಿಗಳ ಭೇಟಿಗೆ ರಾಹುಲ್ ಗೆ ಏಕಾಂಗಿಯಾಗಿ ಸಾಗಿದರು. ಆದರೆ ಸಿಎಂ ಸಿದ್ದರಾಮಯ್ಯ ರಾಹುಲ್ ಗೆ ಸಾಥ್ ನೀಡದೇ ಕಾರಿನಲ್ಲೇ ಕುಳಿತಿದ್ದುದು ಚರ್ಚೆಗೆ ಗ್ರಾಸವಾಗಿತ್ತು.
ವಿಶೇಷವೆಂದರೆ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಕೂಡಾ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಇದುವರೆಗೆ ಈ ಬಗ್ಗೆ ಸಿಎಂ ವಿರುದ್ಧ ಟೀಕೆ ವ್ಯಕ್ತವಾಗಿದ್ದರೂ ಅವರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ರಾಹುಲ್ ಗಾಂಧಿ ಭೇಟಿ ನೆಪದಲ್ಲಿ ಮಠಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ