Publish Date: Wed, 21 Mar 2018 (09:45 IST)
Updated Date: Wed, 21 Mar 2018 (09:46 IST)
ಮಂಗಳೂರು: ನಮೋ ಎಂದರೆ ಮೊದಲೆಲ್ಲಾ ನರೇಂದ್ರ ಮೋದಿ ಎನ್ನುತ್ತಿದ್ದರು. ಆದರೆ ಇದೀಗ ನಮೋ ಎಂದರೆ ಜನರಿಗೆ ನಮಗೆ ಮೋಸ ಎಂದು ಗೊತ್ತಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಭಾಗವಹಿಸಿದ ಜನಾಶೀರ್ವಾದ ಯಾತ್ರೆಯಲ್ಲಿ ಮಾತಾಡಿದ ಶಾಸಕ ಮಧ್ವರಾಜ್, ‘ನಮೋ ಎಂದರೆ ನಮಗೆ ಮೋಸ ಎಂದು ಜನರಿಗೆ ಗೊತ್ತಾಗಿದೆ. ದೇಶವೀಗ ರಾಹುಲ್ ಗಾಂಧಿ ಕಡೆಗೆ ನೋಡುತ್ತಿದೆ. ನೆಹರೂ ಕಾಲದಿಂದ ಈಗಿನ ರಾಹುಲ್ ಗಾಂಧಿಯವರೆಗೂ ವಸುಧೈವ ಕುಟುಂಬಕಮ್ ಎಂಬ ಪರಿಕಲ್ಪನೆಯಲ್ಲಿ ಈ ಮನೆತನ ದೇಶವನ್ನು ಒಟ್ಟಾಗಿ ಕರೆದೊಯ್ಯುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪ್ರಮೋದ್ ಮಧ್ವರಾಜ್ ಗೆ ಉಡುಪಿ ಟಿಕೆಟ್ ಸಿಗುವ ಬಗ್ಗೆ ಇದ್ದ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಅವರೇ ಉಡುಪಿ ಅಭ್ಯರ್ಥಿಯಾಗಿರುತ್ತಾರೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ