Publish Date: Mon, 19 Mar 2018 (06:46 IST)
Updated Date: Mon, 19 Mar 2018 (06:50 IST)
ಪಾಟ್ನಾ :’ಕೇಂದ್ರ ಸರ್ಕಾರ ಉದ್ಯಮಿಗಳ ಹಿತೈಷಿ, ರೈತ ಹಿತೈಷಿಯಲ್ಲ’ ಎಂದು ಹೇಳುವುದರ ಮೂಲಕ ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಝಾರೆ ಅವರು ಮೋದಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಬಿಹಾರದ ಖಗಾಡಿಯದಲ್ಲಿ ನಡೆದ ರೈತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ’ದೇಶದಲ್ಲಿ ಸಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಯಾವುದೇ ಉದ್ಯಮಿ ಆತ್ಮಹತ್ಯೆ ಮಾಡಕೊಂಡಿರುವುದು ವರದಿಯಾಗಿಲ್ಲ’ ಎಂದು ಹೇಳಿದ್ದಾರೆ.
ಹಾಗೆ ಅವರು,’ಸಮಾಜದ ಹಿತದೃಷ್ಟಿಯಿಂದ ನರೇಂದ್ರ ಮೋದಿಗೆ 32 ಪತ್ರಗಳನ್ನು ಬರೆದೆ. ಆದರೆ ಅವರು ವಿದೇಶ ಪ್ರವಾಸದಲ್ಲಿಯೇ ವ್ಯಸ್ತವಾಗಿ ಈವರೆಗೆ ನನ್ನ ಒಂದು ಪತ್ರಕ್ಕೂ ಉತ್ತರಿಸಿಲ್ಲ’ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾರ್ಚ್ 23ಕ್ಕೆ ದಿಲ್ಲಿಯಲ್ಲಿ ರೈತ ಸಮ್ಮೇಳನ ಹಮ್ಮಿಕೊಂಡಿದ್ದು, ಎಲ್ಲ ರೈತರು ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ