Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಟ್ವಿಟರ್ ‘ಸಾಧನೆ’ಗೆ ರಮ್ಯಾ ಕಾರಣವೇ?

ರಾಹುಲ್ ಗಾಂಧಿ ಟ್ವಿಟರ್ ‘ಸಾಧನೆ’ಗೆ ರಮ್ಯಾ ಕಾರಣವೇ?
ಬೆಂಗಳೂರು , ಶುಕ್ರವಾರ, 20 ಅಕ್ಟೋಬರ್ 2017 (08:35 IST)
ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯಗೊಳಿಸುವುದಕ್ಕಾಗಿ ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ನೇಮಿಸಿದ್ದು ವರ್ಕೌಟ್ ಆಗಿದೆಯೇ?

 
ರಾಹುಲ್ ಗಾಂಧಿಯ ಟ್ವಿಟರ್ ‘ಸಾಧನೆ’ ನೋಡಿದರೆ ಹಾಗನಿಸುತ್ತದೆ. ರಮ್ಯಾ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಆಯ್ಕೆಯಾದ ಬಳಿಕ ಇದೀಗ ಕಾಂಗ್ರೆಸ್ ಟ್ವಿಟರ್ ನಲ್ಲಿ ಹೆಚ್ಚು ಸಕ್ರಿಯವಾಗಿದೆ.

ಮಾಧ್ಯಮವೊಂದರ ವರದಿ ಪ್ರಕಾರ ರಾಹುಲ್ ಗಾಂಧಿ ಇದೀಗ ಟ್ವಿಟರ್ ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕಿದ್ದಾರೆ. ಕಳೆದ ಒಂದು ವಾರದಲ್ಲಿ ರಾಹುಲ್ ಮಾಡಿದ ಟ್ವೀಟ್ ಗಳು ಅತೀ ಹೆಚ್ಚು ರಿಟ್ವೀಟ್ ಆಗಿದೆ. ಈ ವಿಷಯದಲ್ಲಿ ರಾಹುಲ್ ಪ್ರಧಾನಿ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನೂ ಹಿಂದಿಕ್ಕಿದ್ದಾರೆ. ಸದ್ಯ ಸೋತು ಸೊರಗಿರುವ, ಗೆಲುವಿನ ಹೊಸ ಹಾದಿ ಹುಡುಕುತ್ತಿರುವ ಕಾಂಗ್ರೆಸ್ ಗೆ ಇದು ದೊಡ್ಡ ಬೂಸ್ಟ್. ರಮ್ಯಾರ ಈ ಸಾಧನೆಗೆ ಅವರಿಗೆ ಪಕ್ಷದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಿದರೂ ಅಚ್ಚರಿಯೇನಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ರಸ್ತೆ ಅಪಘಾತ: ಹಬ್ಬಕ್ಕೆ ಹೊರಟಿದ್ದ ಮೂವರು ಸೇರಿ ಐವರು ಸಾವು