Publish Date: Thu, 07 Dec 2017 (21:33 IST)
Updated Date: Thu, 07 Dec 2017 (21:36 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಯಸ್ಕಾಂತ ಇದ್ದಂತೆ. ಅವರು ಇತರೆ ಪಕ್ಷಗಳನ್ನು ಸೆಳೆಯುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಜಂಟಿ ಹೋರಾಟ ನಡೆಸುವುದಕ್ಕಾಗಿ ಇತರೆ ಸಮಾನಮನಸ್ಕ ಪಕ್ಷಗಳನ್ನು ಒಟ್ಟಿಗೆ ಸೇರಿಸುವ ಸಾಮಾರ್ಥ್ಯ ಇದೆ ರಾಹುಲ್ ಗಾಂಧಿ ಅವರಿಗೆ ಇದೆ ಎಂದಿದ್ದಾರೆ.
ಜವಾಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರ ಕೆಲವು ಗುಣಗಳು ರಾಹುಲ್ ಗಾಂಧಿ ಅವರಲ್ಲಿವೆ. ರಾಹುಲ್ ಗಾಂಧಿ ಅವರಲ್ಲಿ ವಿನಯದ ಗುಣವಿದ್ದು, ಅವರಿಗೆ ಖಂಡಿತವಾಗಿಯೂ ಇತರೆ ಪಕ್ಷಗಳು ಸಹಕಾರ ನೀಡುತ್ತವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.